ಅಂಧೇರಿಯಲ್ಲಿ ಹಳಿ ತಪ್ಪಿದ ಮುಂಬೈ ರೈಲು, ಸಂಚಾರ ಅಸ್ತವ್ಯಸ್ತ
ಮುಂಬೈನ ಹೊರ ವಲಯದ ಅಂಧೇರಿ-ವಿಲೇ ಪಾರ್ಲೆ ಸ್ಟೇಶನ್ ನಡುವೆ ಸ್ಥಳೀಯ ರೈಲೊಂದರ ಏಳು ಬೋಗಿಗಳು ಹಳಿ ತಪ್ಪಿರುವ ಘಟನೆಯೊಂದು ಮಂಗಳವಾರ ನಡೆದಿದೆ...
ಮುಂಬೈ: ಮುಂಬೈನ ಹೊರ ವಲಯದ ಅಂಧೇರಿ-ವಿಲೇ ಪಾರ್ಲೆ ಸ್ಟೇಶನ್ ನಡುವೆ ಸ್ಥಳೀಯ ರೈಲೊಂದರ ಏಳು ಬೋಗಿಗಳು ಹಳಿ ತಪ್ಪಿರುವ ಘಟನೆಯೊಂದು ಮಂಗಳವಾರ ನಡೆದಿದೆ.
ಇಂದು ಬೆಳಗ್ಗೆ 11ರ ಸುಮಾರಿಗೆ ಬೋರಿವಿಲಿಯಿಂದ ಚರ್ಚ್ ಗೇಟ್ ಬಳಿ ಬರುತ್ತಿದ್ದ ಮುಂಬೈನ ಸ್ಥಳೀಯ ರೈಲಿನ 7 ಬೋಗಿಗಳು ಇದ್ದಕ್ಕಿದ್ದಂತೆ ಅಂಧೇರಿ ಮತ್ತು ವಿಲೇ ಪಾರ್ಲೆ ನಿಲ್ದಾಣದ ಬಳಿ ಹಳಿ ತಪ್ಪಿದೆ ಎಂದು ತಿಳಿದುಬಂದಿದೆ.
ರೈಲು ಹಳಿ ತಪ್ಪಿರುವ ಸುದ್ದಿ ಕೇಳುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಇಂಜಿನಿಯರ್ ಗಳು ಹಾಗೂ ರಕ್ಷಣಾ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳದಲ್ಲಿ ಪರೀಶೀಲನೆ ನಡೆಸುತ್ತಿವೆ. ಘಟನೆಯಲ್ಲಿ ಯಾವುದೇ ಗಾಯ, ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಏಳು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇದೀಗ ದಕ್ಷಿಣ ಮುಂಬೈನ ಚರ್ಚ್ ಗೇಟ್ ಮತ್ತು ವಿರಾರ್ ನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರಗಳಲ್ಲಿ ತೀವ್ರ ಅಡಚಣೆಯುಂಟಾಗಿದೆ ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.