ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಸೋಮನಾಥ್ ಭಾರ್ತಿ ನಾಪತ್ತೆಯಾಗಿದ್ದಾರೆ. ದೆಹಲಿ ಮತ್ತು ಆಗ್ರಾದ ಅವರ ಮನೆ ಹಾಗೂ ಕಚೇರಿಯಲ್ಲಿಸೋಮನಾಥ್ ಭಾರ್ತಿ ಸುಳಿವಿಲ್ಲ.
ಸೋಮವಾರ ನ್ಯಾಯಾಲಯ ಸೋಮನಾಥ್ ಭಾರ್ತಿ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ಜಾಮೀನು ರಹಿತ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು. ಜಾಮೀನು ಕೋರಿ ಭಾರ್ತಿ ಪರ ವಕೀಲರು ಹೈಕೋರ್ಟ್‌ನಲ್ಲಿ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ಸೋಮನಾಥ್ ಭಾರ್ತಿ ವಿರುದ್ಧ ಅವರ ಪತ್ನಿ ಲಿಪಿಕಾ ಮಿತ್ರಾ ಕೊಲೆ ಯತ್ನದ ಆರೋಪ ಮಾಡಿದ್ದರು. ಇನ್ನು ಸೋಮನಾಥ್ ಭಾರ್ತಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆಪ್ ಹಿರಿಯ ಮುಖಂಡ ಅಶುತೋಷ್. ಈ ವಿಷಯ ಭಾರ್ತಿ ಅವರ ವಯಕ್ತಿಕ ವಿಚಾರವಾಗಿದ್ದು, ಇದರಲ್ಲಿ ಎಎಪಿ ಪಕ್ಷ ಮದ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.