ದೇಶ

ನೇತಾಜಿ ಕಡತಗಳ ಬಹಿರಂಗ, ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ: ಕಾಂಗ್ರೆಸ್

Lingaraj Badiger

ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸುವ ನಿರ್ಧಾರವನ್ನು ಕಾಂಗ್ರೆಸ್ ಶುಕ್ರವಾರ ಸ್ವಾಗತಿಸಿದೆ. ಆದರೆ ಈ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ ಎಂದು ಹೇಳಿದೆ.

ನೇತಾಜಿ ಕಡತಗಳಿಗೆ ಸಂಬಂಧಿಸಿದ ವಿವಾದಗಳೆಲ್ಲ ಅನಗತ್ಯವಾಗಿತ್ತು ಮತ್ತು ಅವರು ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಸರ್ಕಾರದ ಬಳಿ ಎಲ್ಲಾ ಕಡತಗಳಿವೆ. ಅವನ್ನು ಯಾವಾಗ ಬೇಕಾದರೂ ಅವರು ಬಹಿರಂಗ ಮಾಡಬಹುದು ಎಂದು ಕಾಂಗ್ರೆಸ್ ನಾಯಕ ಸಂದೀಪ್ ದಿಕ್ಷಿತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

'ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಬಹಿರಂಗದಿಂದ ನಮಗೆ ಗೊತ್ತಿಲ್ಲದ ಹೊಸ ವಿಚಾರಗಳು ಬೆಳಕಿಗೆ ಬರಬಹುದು' ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವೂ ನೇತಾಜಿ ಕಡತಗಳನ್ನು ಬಹಿರಂಗಪಡಿಸಬೇಕೆ? ಎಂಬ ಪ್ರಶ್ನೆಗೆ ಉತ್ತರ ದಿಕ್ಷಿತ್, ಈ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ಬಹಿರಂಗಪಡಿಸದಿರುವುದಕ್ಕೆ ಕಾರಣ ಏನು ಎಂಬುದು ಅವರಿಗೆ ಗೊತ್ತು ಎಂದಿದ್ದಾರೆ.

SCROLL FOR NEXT