ಬಿಹಾರದ ರ್ಯಾಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಲಾಲು ಪುತ್ರ ತೇಜಸ್ವಿ 
ದೇಶ

ಚಹಾ ಮಾರುತ್ತಿದ್ದವರು 15 ಲಕ್ಷ ರೂಪಾಯಿ ಸೂಟುಬೂಟು ಧರಿಸುತ್ತಾರೆ: ರಾಹುಲ್ ಗಾಂಧಿ

ಗುಜರಾತ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದವರು ಈಗ ಜನರನ್ನು ಭೇಟಿ ಮಾಡಲು ಬರುವಾಗ 15 ಲಕ್ಷ ರೂಪಾಯಿ ಬೆಲೆಯ ಸೂಟುಬೂಟು ಧರಿಸುತ್ತಾರೆ....

ಬಿಹಾರ: ಗುಜರಾತ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದವರು ಈಗ ಜನರನ್ನು ಭೇಟಿ ಮಾಡಲು ಬರುವಾಗ 15 ಲಕ್ಷ ರೂಪಾಯಿ ಬೆಲೆಯ ಸೂಟುಬೂಟು ಧರಿಸುತ್ತಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ರಾಮನಗರ್ ನ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಒಬ್ಬ ಮನುಷ್ಯ ಧರಿಸುವ ಬಟ್ಟೆ ಆತನ ಬಗ್ಗೆ ಆತನ ನಡವಳಿಕೆ ಬಗ್ಗೆ ತೋರಿಸುತ್ತದೆ. ಮಹಾತ್ಮ ಗಾಂಧಿ  ವಕೀಲರಾಗಿದ್ದಾಗ ಸೂಟು ಬೂಟು ಹಾಕುತ್ತಿದ್ದರು. ಆನಂತರ ದೇಶದ ಜನತೆಯ ಪರ ಹೋರಾಡಲು ತಮ್ಮ ಸೂಟು ಬೂಟನ್ನು ತ್ಯಜಿಸಿದರು ಎಂದರು.

ದೇಶದ ಯುವಕರಿಗೆ ಉದ್ಯೋಗ ನೀಡಬೇಕಾದರೇ ಉದ್ಯೋಗಗಳ ಬಗ್ಗೆ ಮಾಹಿತಿ ಇರುವವರ ಬಳಿ ಮಾತನಾಡಬೇಕು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರ ಜೊತೆ ಹಾಗೂ ಯುವಕರ ಜೊತೆ ಸಮಾಲೋಚಿಸಿ ಸಹಾಯ ಮಾಡಬೇಕು ಎಂದು ರಾಹುಲ್ ಪ್ರಧಾನಿ ಮೋದಿಗೆ ಸಲಹೆ ನೀಡಿದರು.

ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೊಂದು ಸೂಟು ಬೂಟಿನ ಸರ್ಕಾರ ಆಡಳಿತ ನಡೆಸುತ್ತದೆ. ಹೀಗಾಗಿ ನಾವು ಬಿಹಾರವನ್ನು ಸೂಟು ಬೂಟಿನ ಸರ್ಕಾರದಿಂದ ಜನರನ್ನು ರಕ್ಷಿಸಲು ಬಂದಿರುವುದಾಗಿ ತಿಳಿಸಿದರು.

ಪ್ರಧಾನಿ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಸುಳ್ಳಿನ ಸರ್ಕಾರ, ಚಂಪಾರಣ ನಲ್ಲಿ ಮೋದಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೂ ಆ ಸಂಬಂಧ ಕಿಂಚಿತ್ತೂ ಪ್ರಯತ್ನವನ್ನೂ ಮಾಡಿಲ್ಲ ಎಂದು ಟೀಕಿಸಿದರು. ಬಿಹಾರದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಚ್ಚಿನ ಉದ್ಯೋಗವಕಾಶಗಳನ್ನು ತರುವ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ