ದೇಶ

ದೇಶಗಳು ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವುದು ಅದ್ಭುತ: ದಲೈಲಾಮ

Guruprasad Narayana

ಧರ್ಮಶಾಲ: ಘರ್ಷಣೆಗಳಿಂದ ತಮ್ಮ ದೇಶ ತೊರೆದು ಬರುತ್ತಿರುವ ನಿರಾಶ್ರಿತರಿಗೆ ಹಲವು ದೇಶಗಳು ಆಶ್ರಯ ನೀಡಲು ಮುಂದಾಗುತ್ತಿರುವುದು ಅಧ್ಭುತ ವಿಷಯ ಎಂದಿದ್ದಾರೆ ಟಿಬೆಟ್ ನ ಧರ್ಮ ಗುರು ದಲೈಲಾಮ. ಆದರೆ ಈ ವಿವಾದಗಳಿಂದ ಮುಕ್ತಿ ದೊರೆತು ಶಾಂತಿ ನೆಲೆಸಬೇಕು ಎಂದು ಅವರು ಹೇಳಿದ್ದಾರೆ.

"ಹಲವು ದೇಶಗಳು ನಿರಾಶ್ರಿತರನ್ನು ಒಳಗೆ ತೆಗೆದುಕೊಳ್ಳುತ್ತಿರುವುದು ಅದ್ಭುತ ವಿಷಯ, ಆದರೆ ಮುಂದಿನ ದಿನಗಳಲ್ಲಿ ಅವರ ದೇಶಗಳಲ್ಲಿನ ಘರ್ಷಣೆಗಳಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯಬೇಕು" ಎಂದು ಶನಿವಾರ ಅವರ ಅಧಿಕೃತ ಅಂತರ್ಜಾಲ ತಾಣದಲ್ಲಿ ಹೇಳಿಕೆ ನೀಡಿದ್ದಾರೆ.

ಕೇಂಬ್ರಿಜ್ ನ ವರದಿಗಾರನ ಪ್ರಶ್ನೆಯೊಂದಕ್ಕೆ ಶುಕ್ರವಾರ ಉತ್ತರಿಸಿರುವ ಅವರು "ಶಾಂತಿ ನೆಲೆಸಲು ನಾವು ಶ್ರಮಿಸಬೇಕಿದೆ" ಎಂದಿದ್ದಾರೆ.

ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದು ಸರಿಯೇ ಎಂಬ ಪ್ರಶ್ನೆಗೆ "ಎಂದಿಗೂ ಇಲ್ಲ" ಎಂದು ಉತ್ತರಿಸಿದ್ದಾರೆ.

ಯುದ್ಧವನ್ನು ಯಾವುದಾದರೂ ಕಾರಣಕ್ಕೆ ಸಮರ್ಥಿಸಿಕೊಳ್ಳಬಹುದೇ ಎಂಬ ಪ್ರಶ್ನೆಗೆ "ಇದನ್ನು ಉತ್ತರಿಸುವುದು ಕಷ್ಟ. ನಾಜಿ ಸಿದ್ಧಾಂತವನ್ನು ಕೊನೆಗಾಣಿಸಲು ಎರಡನೆ ವಿಶ್ವಯುದ್ಧ ಸಹಕಾರಿಯಾಯಿತು, ದಕ್ಷಿಣ ಕೊರಿಯಾವನ್ನು ಉಳಿಸಲು ಕೊರಿಯಾ ಯುದ್ಧ, ಆದರೆ ವಿಯೆಟ್ನಾಮ್ ಯುದ್ಧದ ಬಗ್ಗೆ ಈ ಮಾತು ಹೇಳಲು ಕಷ್ಟವಾಗುತ್ತದೆ" ಎಂದಿದ್ದಾರೆ.

೧೯೫೯ ರಿಂದ ಟಿಬೆಟ್ ತೊರೆದು ಬಂದಿರುವ ದಲೈಲಾಮ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾರೆ.

SCROLL FOR NEXT