ದೇಶ

ಆಧಾರ್: ಯುಪಿಎ ವಿರುದ್ಧ ಟೆಂಡರ್ ಇಲ್ಲದೇ 13 ಸಾವಿರ ಕೋಟಿ ಮೌಲ್ಯದ ಗುತ್ತಿಗೆ ನೀಡಿರುವ ಆರೋಪ

Srinivas Rao BV

ನವದೆಹಲಿ: ಯುಪಿಎ ಸರ್ಕಾರದ ವಿರುದ್ಧ  ಸುಮಾರು 13 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಯುಐಡಿಎಐ ನ ಆಧಾರ್ ಕಾರ್ಡ್ ಯೋಜನೆಯನ್ನು ಟೆಂಡರ್ ಕರೆಯದೆಲೆ ನೀದಿರುವ ಆರೋಪ ಕೇಳಿಬಂದಿದೆ.
ಆರ್ ಟಿ.ಐ ಕಾರ್ಯಕರ್ತರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಆಧಾರ್ ಕಾರ್ಡ್ ಯೋಜನೆಯಲ್ಲಿ 13 ಸಾವಿರ ಕೋಟಿ ಮೌಲ್ಯದ ಗುತ್ತಿಗೆಯನ್ನು ಟೆಂಡರ್ ಇಲ್ಲದೇ ನೀಡಲಾಗಿದೆ. 6 ,563 ರೂ ಕೋಟಿಯಷ್ಟು ಹಣ ಈಗಾಗಲೇ ಖರ್ಚು ಮಾಡಲಾಗಿದ್ದು ಮೇ.2015 ವರೆಗೆ 90 .3 ಕೋಟಿ ಕಾರ್ಡ್ ಗಳನ್ನು ವಿತರಿಸಲಾಗಿದೆ.
13 ಸಾವಿರ ಮೌಲ್ಯದ ಗುತ್ತಿಗೆಯನ್ನು 25 ಕಂಪನಿಗಳಿಗೆ ಟೆಂಡರ್ ಇಲ್ಲದೇ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ಅಕ್ರಮವಾಗಿ ನೀಡಲಾಗಿದ್ದ ಟೆಂಡರ್ ಗಳ ಬಗ್ಗೆ ತನಿಖೆ ನಡೆಸಬೇಕೆಂದು ಆರ್.ಟಿ.ಐ ಕಾರ್ಯಕರ್ತ ಅನಿಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.  
ಆಧಾರ್ ಯೋಜನೆಯಡಿ 125 ಕೋಟಿ ಜನಸಂಖ್ಯೆಯ ಸೂಕ್ಷ್ಮ ವೈಯಕ್ತಿಕ ಡಾಟಾ ಖಾಸಗಿ ಕಂಪನಿಗಳ ಕೈ ಸೇರುವುದರ ಬಗ್ಗೆ ಸುಪ್ರೀಂ ಕೋರ್ಟ್ ಸೇರಿದಂತೆ ನಾಗರಿಕ ಸಮಾಜದ ಹಲವು ಸಂಘಟನೆಗಳಿಂದ ಆತಂಕ ವ್ಯಕ್ತವಾಗಿತ್ತು. ಇದರ ಪಾರದರ್ಶಕತೆ ಬಗ್ಗೆಯೂ ಮೋದಿ ತನಿಖೆಗೆ ಆದೇಶಿಸಬೆಕಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಅನಿಲ್ ಹೇಳಿದ್ದಾರೆ.

SCROLL FOR NEXT