ಒಡಿಶಾ: ಇಲ್ಲಿನ ಸುಂದೆರ್‌ಗಢ್ ಜಿಲ್ಲೆಯ ಬರಾಯಿ ಎಂಬಲ್ಲಿ ನಿನ್ನೆ (ಶನಿವಾರ) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಒಂಭತ್ತು ಕಬಡ್ಡಿ ಕ್ರೀಡಾಪಟುಗಳು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಕಬಡ್ಡಿ ಪಂದ್ಯವೊಂದನ್ನು ಗೆದ್ದು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಏಳು ಜನರು ಸಂಭವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಕ್ರೀಡಾಪಟುಗಳು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವಿಗೀಡಾಗಿದ್ದಾರೆ.
ವಾಹನದಲ್ಲಿದ್ದ ಇನ್ನಿತರ 5 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.