ನವದೆಹಲಿ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದವರೆಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಇಂದೂ ಸಹ ತನ್ನ ವಾಗ್ದಾಳಿಯನ್ನು ಮುಂದುವರೆಸಿದ್ದು, ಮೋದಿ ಸರ್ಕಾರ ರೈತರ ಭೂಮಿ ಕಸಿಯಲ್ಲು ಯತ್ನಿಸುತ್ತಿದೆ. ಇದು ಮೇಕ್ ಇನ್ ಇಂಡಿಯಾ ಅಲ್ಲ ಟೇಕ್ ಇನ್ ಇಂಡಿಯಾ ಎಂದು ಎಂದು ಭಾನುವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಕಿಸಾನ್ ಮಜ್ದೂರ್ ಸಮ್ಮಾನ್ ರ್ಯಾಲಿಯೊಂದರಲ್ಲಿ ಮಾತನಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಮೇಕ್ ಇನ್ ಇಂಡಿಯಾ ಇದೀಗ ಟೇಕ್ ಇನ್ ಇಂಡಿಯಾ ಆಗುತ್ತಿದೆ. ನಮ್ಮ ಈ ಹೋರಾಟ ಕೃಷಿಗಾಗಿ ಅಲ್ಲ. ಭೂಮಿಗಾಗಿ ಅಲ್ಲ. ನಮ್ಮ ಹೋರಾಟ ರೈತ ಹೃದಯಕ್ಕಾಗಿ. ರೈತರ ಘನತೆ ಹಾಗೂ ಭವಿಷ್ಯಕ್ಕಾಗಿ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಇದೀಗ ರೈತ ಭೂಮಿ ಕಸಿಯಲ್ಲು ಯತ್ನಿಸುತ್ತಿದೆ. ರೈತ ಭೂಮಿ ತಾಯಿ ಇದ್ದಂತೆ. ತಾಯಿಯನ್ನು ಕಸಿದುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ. ನಾವು ಸಂತೋಷದಲ್ಲಿದ್ದಾಗಲೇ ಆಗಲೀ, ದುಖಃದಲ್ಲಿದ್ದಾಗಲೇ ಆಗಲೀ ನಮಗೆ ಮೊದಲು ನೆನಪಾಗುವುದು ನಮ್ಮ ತಾಯಿ. ಅಂತಹ ತಾಯಿಯನ್ನೇ ಕಸಿಯಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ತನ್ನ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಸರ್ಕಾರ ನೇತೃತ್ವದ ಎಲ್ಲಾ ಕಾಯ್ದೆಗಳನ್ನು ಅಂತ್ಯಗೊಳಿಸುವುದಾಗಿ ಈ ಹಿಂದೆ ಬಿಜೆಪಿ ಹೇಳಿತ್ತು. ಇದೀಗ ತನ್ನ ಕೆಟ್ಟ ನಡವಳಿಕೆಯನ್ನು ಮುಂದುವರೆಸಿದ್ದು, ನಮ್ಮ ಸರ್ಕಾರದ 44 ಸಂಸದರು ಇದೀಗ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಮಾತನಾಡಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರನ್ನು ಕಡೆಗಣಿಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಬರಗಾಲ ಕಾಣಿಸಿಕೊಂಡಿದ್ದರೆ, ಕೆಲವೆಡೆ ನೀರು ಮತ್ತು ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಮತ್ತೆ ಕೆಲವು ಪ್ರದೇಶಗಳಲ್ಲಿ ರೈತರು ಬೆಳೆಯಲು ಬೀಜಗಳೇ ಸಿಗುತ್ತಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತನ್ನು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಇದೀಗ ರೈತರು ಸಮಸ್ಯೆ ಎದುರಿಸುತ್ತಿಲ್ಲ. ಎಲ್ಲಾ ರೀತಿಯಲ್ಲೂ ಸರಿಯಿದೆ ಎಂದು ಹೇಳಿಕೊಳ್ಳುವ ಒಂದು ರಾಜ್ಯವೂ ನಮ್ಮ ದೇಶದಲ್ಲಿಲ್ಲ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ರೈತರ ಭೂಮಿ ಕಸಿಯಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಎನ್ ಡಿಎ ಸರ್ಕಾರದ ಭೂ ಸ್ವಾಧೀನ ಮಸೂದೆಗೆ ಯಶಸ್ವಿಯಾಗಿಲ್ಲ. ರೈತರು ತಮ್ಮ ಭೂಮಿ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಿದೆ. ಎಚ್ಚರಿಕೆ ವಹಿಸಲಿಲ್ಲದಾದರೆ ರೈತರು ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದೀಗ ಸ್ಥಳದಲ್ಲಿ ನೆರೆದಿರುವ ಜನ ಸಂಖ್ಯೆ ಕಂಡು ಬಿಜೆಪಿಗೆ ಹೆದರಿಕೆಯುಂಟಾಗುತ್ತಿದೆ. ರೈತ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಅವರು ಚಿಕ್ಕ ವಿಚಾರವಾಗಿ ತೆಗೆದುಕೊಂಡುದ್ದಾರೆ. ರೈತರ ಸಮಸ್ಯೆಯನ್ನು ದೊಡ್ಡ ಧನಿಯಾದರೆ ಈ ವಿಚಾರವನ್ನು ಅವರು ದೊಡ್ಡದಾಗಿ ಪರಿಗಣಿಸುತ್ತಾರೆ.
2013ರ ಭೂ ಸ್ವಾಧೀನ ಮಸೂದೆ ತಿದ್ದುಪಡಿಯನ್ನು ಇದೀಗ ಕಾಂಗ್ರೆಸ್ ಪಕ್ಷ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಸಮಸ್ಯೆಯನ್ನು ರೈತ ಸಂಘಟನೆಗಳು ಹಾಗೂ ನಾಗರೀಕ ಸಮಾಜಗಳು ಗಂಭೀರವಾಗಿ ಪರಿಗಣಿಸಬೇಕಿದ್ದು, ತಮ್ಮ ಹೆಜ್ಜೆಯನ್ನು ಮುಂದಿಟ್ಟು ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.