ಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ (ಸಂಗ್ರಹ ಚಿತ್ರ) 
ದೇಶ

ಲಂಕಾ ನೌಕಾಪಡೆಯಿಂದ 15 ಮಂದಿ ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ ಶ್ರೀಲಂಕಾದ ನೌಕಾಪಡೆ 15 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.

ರಾಮೇಶ್ವರಂ: ಶ್ರೀಲಂಕಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ ಶ್ರೀಲಂಕಾದ ನೌಕಾಪಡೆ 15 ಮಂದಿ ಭಾರತೀಯ  ಮೀನುಗಾರರನ್ನು ಬಂಧಿಸಿದೆ.

ಭಾರತ-ಶ್ರೀಲಂಕಾ ನಡುವಿನ ಅಂತಾರಾಷ್ಟ್ರೀಯ ಸಮುದ್ರ ಗಡಿ ಪ್ರದೇಶ ಕಚ್ಚಾತೀವು ಬಳಿಯಲ್ಲಿ ಮೀನುಗಾರರನ್ನು ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಮೀನುಗಾರರು ನಡೆಸುತ್ತಿದ್ದ 2  ಬೋಟ್ ಗಳ ಅನ್ನು ಕೂಡ ಲಂಕಾ ನೌಕಾಪಡೆ ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಅಕ್ಕರೈಪೇಟ್ಟೈ ಮತ್ತು ನಾಗಪಟ್ಟಣಂಗೆ ಸೇರಿದವರು ಎನ್ನಲಾಗುತ್ತಿದ್ದು, ಎಲ್ಲ 15 ಮಂದಿ ಮೀನುಗಾರರನ್ನು  ಪ್ರಸ್ತುತ ಕಾಂಗೇಸುಂತುರೈನಲ್ಲಿನ ಜೈಲಿಗೆ ರವಾನಿಸಲಾಗಿದೆ ಎಂದು ಎಂದು ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಕಳೆದ ಸೋಮವಾರ ರಾತ್ರಿ ಕಚ್ಚಾತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ಸುಮಾರು 60 ಬೋಟ್ ಗಳ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ವಸ್ತುಗಳನ್ನು  ಲಂಕಾದ ನೌಕಾಪಡೆಯ ಸಿಬ್ಬಂದಿ ನಾಶ ಮಾಡಿದ್ದಲ್ಲದೇ ಅವುಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಸ್ಥಳೀಯ ಮೀನುಗಾರರ ಸಂಘದ ಒಕ್ಕೂಟದ ಮುಖಂಡರಾದ ಎಸ್.ಎಮೆರಿಟ್ ಮತ್ತು ಸಗಾಯರಾಜು ಅವರು, "ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ  ನಡೆಸುತ್ತಿದ್ದ ಮೀನುಗಾರಿಕಾ ಬೋಟ್ ಅನ್ನು ಲಂಕಾದ ನೌಕಾಪಡೆ ಅಕ್ರಮವಾಗಿ ಬೆನ್ನಟ್ಟಿತು. ಈ ವೇಳೆ ಒಂದು ಬೋಟ್ ನೀರಿನಲ್ಲಿ ಮುಳುಗಿತು. ಜೊತೆಗಿದ್ದ ಬೋಟ್ ನ ಸಹಾಯದಿಂದ  ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಯಿತು".

"ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರರಿಗೆ ಗನ್ ತೋರಿಸಿ ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಬೆದರಿಕೆ  ಹಾಕುತ್ತಿದ್ದಾರೆ. ಅಲ್ಲದೆ ನಮ್ಮ ಸುಮಾರು 60 ಬೋಟ್ ಗಳಲ್ಲಿನ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ಸಲಕರಣೆಗಳನ್ನು ನಾಶ ಮಾಡಿ ಸಮುದ್ರಕ್ಕೆ ಎಸೆದಿದ್ದಾರೆ. ಇದರಿಂದಾಗಿ  ಭಯಬೀತರಾದ ನಮ್ಮ ಮೀನುಗಾರರು ಯಾವುದೇ ಮೀನುಗಳನ್ನು ತರದೇ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ" ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT