ಚೆನ್ನೈ:ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ಈ ಘಟನೆಗೆ ಪೂರಕವಾಗಿದೆ. ಕಾನೂನು ರಕ್ಷಿಸಬೇಕಾದವರೇ ಕಾನೂನು ಭಕ್ಷಕರಾದರೆ ಹೀಗೆಯೇ ಆಗುತ್ತದೆ.
ಚೆನ್ನೈನಲ್ಲಿ ಕಳೆದ ರಾತ್ರಿ ಸುಂದರ ಪಾಂಡಿಯಾನ್ ಎಂಬ ಸಬ್ ಇನ್ಸ್ ಪೆಕ್ಟರೊಬ್ಬರು ತಮ್ಮ 28 ವರ್ಷದ ಅಳಿಯ ರಾಜಶೇಖರ್ ನನ್ನು ರಿವಾಲ್ವರ್ ನಿಂದ ಶೂಟ್ ಮಾಡಿದ್ದಾರೆ.ಇವರಿಬ್ಬರ ಮಧ್ಯೆ ಜಗಳ, ದ್ವೇಷಗಳು ಇತ್ತೆ ಎಂಬುದು ತಿಳಿದುಬಂದಿಲ್ಲ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚೆನ್ನೈನ ದೇವನಾಥನ್ ರಸ್ತೆ ಮತ್ತು ಸೈಂಟ್ ಮೇರಿ ರಸ್ತೆ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದ್ದು, ರಾಜಶೇಖರ್ ಅವರನ್ನು ಅದ್ಯರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.