ಅಹಮದಾಬಾದ್: ಅಸಾರಾಂ ಬಾಪೂ ಅತ್ಯಾಚಾರ ಪ್ರಕರಣದ ಸಾಕ್ಷಿಗಳ ಕೊಲೆ ಹಾಗೂ ಹಲ್ಲೆಗೆ ಸಂಬಂಧಪಟ್ಟಂತೆ ಅಹಮದಾಬಾದ್ ಪೊಲೀಸರು ಬೆಂಗಳೂರಿನ ದಂಪತಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಜಯಪುರ ಮೂಲದ ಬಸವರಾಜ್(28) ಹಾಗೂ ಸೆಜಲ್ ಪ್ರಜಾಪತಿ(26) ಎಂದು ಗುರುತಿಸಲಾಗಿದ್ದು, ಇಬ್ಬ ರನ್ನೂ ಸೋಮವಾರ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ವಹಿಸಿದೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಅಸಾರಾಂ ಬಾಪೂ ಅತ್ಯಾಚಾರ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬನಾದ ಲಾಲಾ ಥಾಕೂರ್ ಕೊಲೆ ಯತ್ನ ಸಂಬಂಧ ಸದ್ಯಕ್ಕೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ದೇಶಾದ್ಯಂತ ಅಸಾರಾಂ ವಿರುದ್ಧ ಸಾಕ್ಷಿಗಳ ಕೊಲೆ ಮತ್ತು ಹಲ್ಲೆ ಯತ್ನದಲ್ಲಿ ಇವರು ಭಾಗಿಯಾಗಿ ರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಗುಜರಾತ್, ಉತ್ತರಪ್ರದೇಶ, ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ಅಸಾರಾಂ ವಿರುದ್ಧ ಮೂವರು ಸಾಕ್ಷಿಗಳನ್ನು ಕೊಲೆ ಮಾಡಲಾಗಿದ್ದು, ಎಂಟು ಮಂದಿ ಮೇಲೆ ಕೊಲೆ ಯತ್ನ ನಡೆದಿದೆ. ವಿಜಯಪುರ ಮೂಲದ ಬಸವರಾಜ್, ದಮನ್ ಮೂಲದ ಸೆಜಲ್‍ಳನ್ನು 2012ರಲ್ಲಿ ಮೊಟೆರಾದ ಅಸಾರಾಂ ಆಶ್ರಮದಲ್ಲಿ ಭೇಟಿಯಾಗಿದ್ದು, ಬಳಿಕ ಇಬ್ಬರೂ
ಮದುವೆಯಾಗಿದ್ದರು. ಅಸಾರಾಂ ವಿರುದ್ಧ ಸರಣಿ ಅತ್ಯಾಚಾರ ಪ್ರಕರಣಗಳ ಬಳಿಕ ಸಾಕ್ಷಗಳ ನಾಶಕ್ಕೆ ಆತ ರಚಿಸಿದ್ದ 17 ಜನರ ಕಟ್ಟಾ ಶಿಷ್ಯರ ತಂಡದಲ್ಲಿ ಈ ಇಬ್ಬರೂಇದ್ದರು. ಅಲ್ಲದೆ, ಸಾಕ್ಷಿಗಳ ಕೊಲೆ ಮತ್ತು ಹಲ್ಲೆಗೆ ಬಾಡಿಗೆ ಹಂತಕರನ್ನು ಪಡೆಯುತ್ತಿದ್ದ ಈ ಜೋಡಿ, ಸಾಕ್ಷಿಗಳ ವಿಶ್ವಾಸ ಗಳಿಸಲು ಅಸಾರಾಂ ವಿರುದ್ಧ ಬೆದರಿಕೆ ದೂರುಗಳನ್ನು ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics