ಡುಬ್ಲಿನ್: ಐರ್ಲೆಂಡ್ ಹಾಗೂ ಅಮೇರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಐರ್ಲೆಂಡ್ ನ ರಾಜಧಾನಿ ಡುಬ್ಲಿನ್ ಗೆ ಆಗಮಿಸಿದ್ದಾರೆ.
ಐರ್ಲೆಂಡ್ ಟಾಯ್ಸೀಚ್ (ಪ್ರಧಾನ ಮಂತ್ರಿ) ಎಂಡ ಕೆನ್ನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಐರ್ಲೆಂಡ್ ನ ಟಾಯ್ಸೀಚ್ ಅವರೊಂದಿಗೆ ಮಾತನಾಡಿದ ನಂತರ ಅಲ್ಲಿ ವಾಸವಾಗಿರುವ ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ನಂತರ ನ್ಯೂಯಾರ್ಕ್ ಗೆ ಪ್ರಯಾಣಿಸಲಿದ್ದಾರೆ.
ಗುರುವಾರ ಜಾನ್ ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 70 ನೇ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ನಂತರ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದು ಪ್ರಮುಖ ವ್ಯಾಪಾರ ಮತ್ತು ಬಂಡವಾಳ ನೆರವು ಸಂಬಂಧಿಸಿದ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.