ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಲಡಾಕ್: ಚೀನಾ ನಿರ್ಮಿತ ಗುಡಿಸಲು ಧ್ವಂಸಗೊಳಿಸಿದ ಭಾರತೀಯ ಪಡೆ

ಲಡಾಕ್ ಪ್ರಾಂತ್ಯದಲ್ಲಿ ಚೀನಾ ನಿರ್ಮಿಸಿದ್ದ ಗುಡಿಸಲನ್ನು ಭಾರತೀಯ ಪಡೆ ಧ್ವಂಸ ಮಾಡಿದ್ದು, ಚೀನಾದ ರಕ್ಷಣಾ ಸಚಿವಾಲಯ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಲಡಾಕ್ ನಲ್ಲಿ ಚೀನಾ ಪಡೆ(ಸಾಂಕೇತಿಕ ಚಿತ್ರ)
Srinivas Rao BV
Updated On : 25 Sept 2015, 6:03 am

ಬೀಜಿಂಗ್: ಲಡಾಕ್ ಪ್ರಾಂತ್ಯದಲ್ಲಿ ಚೀನಾ ನಿರ್ಮಿಸಿದ್ದ ಗುಡಿಸಲನ್ನು ಭಾರತೀಯ ಪಡೆ ಧ್ವಂಸ ಮಾಡಿದ್ದು, ಚೀನಾದ ರಕ್ಷಣಾ ಸಚಿವಾಲಯ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಚೀನಾ ನಿರ್ಮಿಸಿದ್ದು  ಕಾವಲು ಗೋಪುರ ಮಾದರಿಯ ಆಕೃತಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದ್ದರೆ, ಮತ್ತೆ ಕೆಲವು ಮಾಧ್ಯಮಗಳು ಅದನ್ನು ಗುಡಿಸಲು ಎಂದು ಹೇಳಿವೆ. ಚೀನಾದೊಂದಿಗೆ ಗಡಿ ವಿವಾದ ಎದುರಿಸುತ್ತಿರುವ ಭಾರತ ತನ್ನ ಪ್ರದೇಶದಲ್ಲಿ ಚೀನಾ ನಿರ್ಮಿತ ವಸ್ತುವನ್ನು ಧ್ವಂಸಗೊಳಿಸಿರುವುದರ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಉಭಯ ರಾಷ್ಟ್ರಗಳ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿದ ಒಪ್ಪಂದದಂತೆ ಭಾರತೀಯ ಪಡೆಗಳು ನಡೆದುಕೊಂಡಿಲ್ಲ ಎಂದು ಆರೋಪಿಸಿದೆ.
ಒಪ್ಪಂದದ ಅಂಶಗಳನ್ನು ತಕ್ಷಣವೇ ಪಾಲಿಸಬೇಕೆಂದು ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಒತ್ತಾಯಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳದೇ ಇರಲು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments