ತರಕಾರಿ 
ದೇಶ

ಮಾಂಸ ನಿಷೇಧಿಸಿದಂತೆ ಬಕ್ರೀದ್‍ಗೆ ತರಕಾರಿ ನಿಷೇಧಿಸಿ: ಫಲಾಹ್ ಫೈಸಲ್

ಜೈನ ಸಮುದಾಯದ ‘ಪರ್ಯೂಷಣಾ ಪರ್ವ’ ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಿದಂತೆ ಬಕ್ರಿದ್ ಆಚರಣೆ ಹಿನ್ನೆಲೆ ತರಕಾರಿಯನ್ನು ನಿಷೇಧಿಸುವಂತೆ...

ನವದೆಹಲಿ: ಜೈನ ಸಮುದಾಯದ ‘ಪರ್ಯೂಷಣಾ ಪರ್ವ’ ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಿದಂತೆ ಬಕ್ರಿದ್ ಆಚರಣೆ ಹಿನ್ನೆಲೆ ತರಕಾರಿಯನ್ನು ನಿಷೇಧಿಸುವಂತೆ ಫಲಾಹ್ ಫೈಸಲ್ ಆಗ್ರಹಿಸಿದ್ದಾನೆ.
ಪರ್ಯೂಷಣಾ ಪರ್ವ ಆಚರಣೆ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಮಾಂಸ ಮಾರಾಟ ನಿಷೇಧಿಸಿದಂತೆ ತಂದ ನಂತರ ಒಂದಿಲ್ಲೊಂದು ಕಾರಣಕ್ಕಾಗಿ ಕೆಲವು ರಾಜ್ಯಗಳಲ್ಲಿ ಮಾಂಸ ನಿಷೇಧದ ಹೊಸ ಪರಿಪಾಠವೊಂದು ಹುಟ್ಟಿಕೊಂಡಿದ್ದು, ಅದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.
ಇದೀಗ ಬೆಂಗಳೂರಿನ ಕೊಮೆಡಿಯನ್ ಫಲಾಹ್ ಫೈಸಲ್, Change.org ನ ಮುಖಾಂತರ ಬಕ್ರೀದ್ ಪ್ರಯುಕ್ತ ಒಂದು ದಿನದ ಮಟ್ಟಿಗೆ ತರಕಾರಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾನೆ. ಪ್ರಾಣಿಗಳಿಗೆ ನೋವುಂಟಾಗುತ್ತದೆ ಎಂದೋ ಅಥವಾ ಅವುಗಳ ಭಾವನೆಗಳಿಗೆ ಧಕ್ಕೆಯುಂಟಾಗುವ ಕಾರಣಕ್ಕೆ ಮಾಂಸಾಹಾರವನ್ನು ನಿಷೇಧಿಸುವುದಾದರೆ, ಸಸ್ಯಗಳಿಗೂ ಭಾವನೆಗಳಿವೆ, ಅವುಗಳಿಗೂ ನೋವಾಗುತ್ತದೆ ಎಂಬುವುದನ್ನು ನಾವು ಮರೆಯಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾನೆ.
ಮುಸ್ಲಿಂರು ಒಂದು ತಿಂಗಳ ಕಾಲ ರಮ್‌ಜಾನ್ ಉಪವಾಸ ಆಚರಿಸುತ್ತಾರೆ. ಹೀಗಿರುವಾಗ ಒಂದು ದಿನದ ಮಟ್ಟಿಗೆ ಸಸ್ಯಾಹಾರಿಗಳು ತರಕಾರಿಯನ್ನು ಬಿಡುವುದು ಕಷ್ಟವೆನೆಲ್ಲ ಎಂದು ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಫೈಸಲ್ ಸಸ್ಯಾಹಾರ ನಿಷೇಧಕ್ಕೆ ಆಗ್ರಹಿಸುತ್ತಾರೆ. 
ತರಕಾರಿಗಳು ನಿಷೇಧಗೊಂಡಿವೆ ಎಂದು ಸಸ್ಯಾಹಾರಿಗಳು ಹಸಿದು ಕುಳಿತುಕೊಳ್ಳಬೇಕಾಗಿಲ್ಲ, ತಮ್ಮ ಧಾರ್ಮಿಕ ನಂಬಿಕೆಗಳನ್ನೆಲ್ಲಾ ಒಂದು ದಿನದ ಮಟ್ಟಿಗೆ ಬದಿಗಿರಿಸಿ ಸೌಹಾರ್ದತೆಯ ಪ್ರಯುಕ್ತ ಬಕ್ರೀದ್ ದಿನ ಪ್ರತಿಯೊಬ್ಬ ಸಸ್ಯಾಹಾರಿಯೂ ‘ಮಟನ್ ಬಿರಿಯಾನಿ’ ಸೇವನೆಯಲ್ಲಿ ಭಾಗವಹಿಸಬೇಕೆಂದು ಪರ್ಯಾಯ ಉಪಾಯವನ್ನೂ ಕೊಡುತ್ತಾರೆ ಫೈಸಲ್. ಈಗಾಗಲೇ ಇವರ ಅರ್ಜಿಯನ್ನು 500 ಮಂದಿ ಬೆಂಬಲಿಸಿದ್ದು, ಇನ್ನು 490 ಮಂದಿಯ ಬೆಂಬಲ ದೊರಕಿದರೆ ಗುರಿ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ