ದೇಶ

ಕೇಂದ್ರದಿಂದ ಆಂಧ್ರಪ್ರದೇಶಕ್ಕೆ 1 ಸಾವಿರ ಕೋಟಿ ರೂಪಾಯಿ ವಿಶೇಷ ನೆರವು

Srinivas Rao BV

ನವದೆಹಲಿ: ಆಂಧ್ರಪ್ರದೇಶಕ್ಕೆ 1 ಸಾವಿರ ಕೋಟಿ ರೂಪಾಯಿ ವಿಶೇಷ ನೆರವು ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೀಡಲಾಗುವ ಒಂದು ಸಾವಿರ ಕೋಟಿಯಲ್ಲಿ, ರಾಜ್ಯದ ಏಳು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ನೀಡಲಾಗುವ 350 ಕೋಟಿಯೂ ಸೇರಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆಂಧ್ರಪ್ರದೇಶದ ನೂತನ ರಾಜಧಾನಿ ನಿರ್ಮಾಣಕ್ಕಾಗಿ 350 ಹೆಚ್ಚುವರಿ ಅನುದಾನ ನೀಡಲಾಗಿದೆ.
ನೂತನ ರಾಜಧಾನಿಯಲ್ಲಿ ರಾಜಭವನ, ಹೈಕೋರ್ಟ್, ಸರ್ಕಾರದ ಸಚಿವಾಲಯ, ವಿಧಾನಸಭೆ ನಿರ್ಮಾಣಕ್ಕಾಗಿ ಹೆಚ್ಚುವರಿ 350 ಕೋಟಿ ರೂಪಾಯಿ ಘೋಷಿಸಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ,  ರೂ 300 ಕೋಟಿ ಪೊಲವರಂ ನೀರಾವರಿ ಯೋಜನೆಗೆ ಖರ್ಚಾಗುತ್ತದೆ. 2014 -15 ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ರೂ.4 ,403 ಕೋಟಿ ರೂಪಾಯಿ ನೀಡಲಾಗಿತ್ತು.

SCROLL FOR NEXT