ಪಟನಾ/ಜೆಮ್ಶೆಡ್‍ಪುರ/ಖಗಾರಿಯಾ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮೀಸಲು ನೀತಿಯೇ ರದ್ದು ಮಾಡೀತು. ಇಂಥ ಒಂದು ಆತಂಕ ವ್ಯಕ್ತಪಡಿಸಿದ್ದು ಜೆಡಿಯು ನಾಯಕ ನಿತೀಶ್‍ಕುಮಾರ್.
ಬಿಹಾರದ ಖಗಾರಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲು ನೀತಿ ಪರಿಶೀಲನೆಗೆ ಈಗಾಗಲೇ ಸಲಹೆ ಮಾಡಿದ್ದಾರೆ. ಹೀಗಾಗಿ ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಗೆದ್ದರೆ ಒಬಿಸಿ, ಎಸ್‍ಸಿ, ಎಸ್‍ಟಿಗಳಿಗೆ ನೀಡಲಾಗಿರುವ ಮೀಸಲು ಸೌಲಭ್ಯ ರದ್ದಾಗಲಿದೆ ಎಂದು ಹೇಳಿದ್ದಾರೆ.
ಆರ್‍ಜೆಡಿಜೆಡಿಯುಕಾಂಗ್ರೆಸ್ ಮೈತ್ರಿಕೂಟ ಗೆದ್ದರೆ ಬಿಹಾರದ ಸರ್ಕಾರಿ ಉದ್ಯೋಗ ವ್ಯವಸ್ಥೆಯಲ್ಲಿ ಶೇ.35ರಷ್ಟು ಮೀಸಲು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಬಿಹಾರಕ್ಕೆ ರು.2.70 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿಯನ್ನು ಲೇವಡಿ ಮಾಡಿದ ನಿತೀಶ್, ``ನೀವೇನೂ ಚಿಂತೆ ಮಾಡಬೇಡಿ. ನಮಗೆ ನಮ್ಮ ಅಭಿವೃದ್ಧಿಗಾಗಿ ಯಾವ ರೀತಿ ಸಂಪನ್ಮೂಲ ಸಂಗ್ರಹಿಸಬೇಕು ಎನ್ನುವುದು ಗೊತ್ತು'' ಎಂದಿದ್ದಾರೆ.
ಯಾವುದೇ ಜನಾಂಗಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪಥದಲ್ಲಿ ಬಿಹಾರವನ್ನು ಮುನ್ನಡೆಸುವುದಾಗಿ ಅವರು ಪ್ರತಿಪಾದಿಸಿದ್ದಾರೆ. ನಿತೀಶ್ ಬೆಂಬಲ: ಗುಜರಾತ್‍ನಲ್ಲಿ ಪಟೇಲ್ ಮೀಸಲು ನೀಡುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ನಿತೀಶ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಮಾರ್ ಪಟೇಲ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ನಿರ್ಧಾರ ಎಂದಿದ್ದಾರೆ ಹಾರ್ದಿಕ್.
ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಬಿಹಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾŒಸಿದ್ದಾರೆ. ಜೆಮ್ಶೆಡ್‍ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ಆರು ದಶಕಗಳಿಂದ ದೇಶದಲ್ಲಿರುವ ಮೀಸಲು ವ್ಯವಸ್ಥೆ ಬದಲಾಗಬೇಕೆಂದು ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದ್ದಾರೆ.