ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಾಕ್‌ನಿಂದ ಪಂಜಾಬ್ ಪ್ರವೇಶಿಸಿದ 15-20 ಉಗ್ರರು, ದೆಹಲಿ ಮೇಲೆ ದಾಳಿ?

ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ 15 ರಿಂದ 20 ಉಗ್ರರು ಗಡಿಯಿಂದ ಅಕ್ರಮವಾಗಿ ಪಂಜಾಬ್‌ ಪ್ರವೇಶಿಸಿದ್ದು , ದೆಹಲಿ ಸೇರಿದಂತೆ ದೇಶದ ವಿವಿಧ ಕಡೆ ದಾಳಿ...

ಸಾಂದರ್ಭಿಕ ಚಿತ್ರ
Lingaraj Badiger
Updated On : 28 Sept 2015, 4:26 am

ನವದೆಹಲಿ: ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ 15 ರಿಂದ 20 ಉಗ್ರರು  ಗಡಿಯಿಂದ ಅಕ್ರಮವಾಗಿ ಪಂಜಾಬ್‌ ಪ್ರವೇಶಿಸಿದ್ದು , ದೆಹಲಿ ಸೇರಿದಂತೆ ದೇಶದ ವಿವಿಧ ಕಡೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ  ಐಎಸ್‌ಐ ನಿಂದ ಈ ಉಗ್ರರು  ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಭಾರತಕ್ಕೆ ನುಸುಳಿರುವ ಉಗ್ರರು ಸಿಖ್‌ ಉಗ್ರಗಾಮಿ ಸಂಘಟನೆಗಳಾದ ಬಬ್ಬರ್‌ ಖಲ್ಸಾ , ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌ ನೊಂದಿಗೆ ಕೈಜೋಡಿಸಲು ಯತ್ನಿಸಿವೆ ಎಂದು ಹೇಳಲಾಗಿದೆ.

ಪಾಕ್‌ ಐಎಸ್‌ಐ ಲಷ್ಕರ್‌, ಹಿಜ್ಬುಲ್‌, ಜೈಷೆ ಮೊಹಮದ್‌ ಉಗ್ರ ಸಂಘಟನೆಗಳೊಂದಿಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಾಳಿಗಾಗಿ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement