ದೇಶ

ಬೀಫ್ ನಿಷೇಧ; ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ವಿಚಾರಣೆ ಮಾಡಲಿರುವ ಸುಪ್ರೀಮ್

Guruprasad Narayana

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ನಿಷೇಧದ ಬಗೆಗೆ ಹೈಕೋರ್ಟ್ ನೀಡಿರುವ ಎರಡು ಗೊಂದಲಮಯ ಆದೇಶಗಳು, ರಾಜ್ಯದಲ್ಲಿ ಶಾಂತಿ ಕದಡಲು ಬಳಕೆಯಾಗುತ್ತವೆ ಎಂದು ದೂರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ಸುಪ್ರೀಮ್ ಕೋರ್ಟ್ ಒಪ್ಪಿಕೊಂಡಿದೆ.

ಜಮ್ಮು ಕಾಶ್ಮೀರ ಹೈಕೋರ್ಟ್ ಎರಡು ವಿಭಿನ್ನ ತೀರ್ಪುಗಳಲ್ಲಿ ಗೋಮಾಂಸ ಮಾರಾಟವನ್ನು ನಿಷೇಧ ಮಾಡಿ ಹಾಗು ಗೋ ಸಂಬಂಧಿ ಪ್ರಾಣಿಗಳ ಹತ್ಯೆಯ ಕಾನೂನನ್ನು ರದ್ದುಗೊಳಿಸಿ ತೀರ್ಪು ನೀಡಿದೆ.  

ಈ ಆದೇಶಗಳಲ್ಲಿ ಇರುವ ವಿರೋಧಾತ್ಮಕ ಗುಣಗಳನ್ನು ಸರ್ಕಾರದ ಪರವಾಗಿ ಹಿರಿಯ ವಕೀಲ ಅಮರೇಂದ್ರ ಶರಣ್ ಅವರು ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಅವರ ಪೀಠದ ಮುಂದೆ ತಂದು ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.

"ಸೋಮವಾರಕ್ಕೆ ಪಟ್ಟಿ ಮಾಡಿ" ಎಂದು ವಿಭಾಗೀಯ ಪೀಠ ಹೇಳಿದೆ.

ಜಮ್ಮುವಿನ ಹೈಕೋರ್ಟ್ ಪೀಠ ಸೆಪ್ಟಂಬರ್ ೮ ರಂದು ರಣಬೀರ್ ಪೀನಲ್ ಕೋಡ್ ಅಡಿ ಬೀಫ್ ನಿಷೇಧ ಮಾಡುವಂತೆ ಪೊಲೀಸರಿಗೆ ಆದೇಶ ನೀಡಿದ್ದರೆ, ಒಂದು ವಾರದ ನಂತರ ಹೈಕೋರ್ಟಿನ ಶ್ರೀನಗರ ಪೀಠ, ರಣಬೀರ್ ಪೀನಲ್ ಕೋಡ್ ಗೋಹತ್ಯೆಯನ್ನು ನಿಷೇಧಿಸಿದ್ದ ಕಾನೂನನ್ನು ರದ್ದು ಪಡಿಸಲು ಸಲ್ಲಿಸಿದ್ದ ಸಾರ್ವಜನಿಕ ವಿಚಾರಣ ಅರ್ಜಿಯನ್ನು ಪುರಸ್ಕರಿಸಿ ತೀರ್ಪು ನೀಡಿತ್ತು.

SCROLL FOR NEXT