ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ ಇನ್ಮುಂದೆ ಖಾದಿ ಸಮವಸ್ತ್ರ

ಏರ್ ಇಂಡಿಯಾ ವಿಮಾನ ಸಿಬ್ಬಂದಿ ಇನ್ನು ಮುಂದೆ ಖಾದಿ ಸಮವಸ್ತ್ರ ಧರಿಸಲಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಏರ್ ಇಂಡಿಯಾ ವಿಮಾನದ ಆಡಳಿತ ಮಂಡಳಿ ಜೊತೆ ಒಪ್ಪಂದ ಮಾಡಿಕೊಂಡಿದೆ

ಸಾಂದರ್ಭಿಕ ಚಿತ್ರ
Shilpa D
Updated On : 2 Apr 2016, 4:25 am

ನವದೆಹಲಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಇನ್ನು ಮುಂದೆ ಖಾದಿ ಸಮವಸ್ತ್ರ ಧರಿಸಲಿದ್ದಾರೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಏರ್ ಇಂಡಿಯಾ ವಿಮಾನದ ಆಡಳಿತ ಮಂಡಳಿ ಜೊತೆ ಒಪ್ಪಂದ ಮಾಡಿಕೊಂಡಿದೆ.ಮಹಿಳೆಯರಿಗೆ ಖಾದಿ ರೇಷ್ಮೆ ಸೀರೆ, ರವಿಕೆ, ಪುರುಷರಿಗೆ ಖಾದಿ ಪ್ಯಾಂಟ್ ಮತ್ತು ಷರ್ಟ್ ಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಪೂರೈಸಲಿದೆ.

ಇನ್ನೂ ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಖಾದಿ ವಸ್ತ್ರಗಳು ಸಿಗಲಿವೆ. ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಸಿಬ್ಬಂದಿ ಮೊದಲ ಬಾರಿಗೆ ಈ ಖಾದಿ ಸಮವಸ್ತ್ರ ಧರಿಸಲಿದ್ದಾರೆ.

ಏರ್ ಇಂಡಿಯಾ ವಿಮಾನದ ನಂತರ ಇತರೆ ಏರ್ ಲೈನ್ಸ್ ಗಳೊಂದಿಗೂ ಖಾದಿ ಸಮವಸ್ತ್ರ ಪೂರೈಸುವ ಸಂಬಂಧ ಕರಾರು ಮಾಡಿಕೊಳ್ಳಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಚಿಂತನೆ ನಡೆಸುತ್ತಿದೆ.

ಇನ್ನು ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಗೆಸ್ಟ್ ಹೌಸ್ ಸಿಬ್ಬಂದಿಗೆ ಖಾದಿ ಸಮವಸ್ತ್ರ ನೀಡುವಂತೆ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಚರ್ಚೆ ನಡೆಸಿದೆ. ಈಗಾಗಲೇ ಗೋವಾ ಸರ್ಕಾರ ಗೆಸ್ಟ್ ಹೌಸ್ ಗಳಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ಸಿಬ್ಬಂದಿಗೆ ಖಾದಿ ಸಮವಸ್ತ್ರ ನೀಡಲು ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments