ನವದೆಹಲಿ: ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಕೇಳಿಬರುತ್ತಿದ್ದು, ಈ ಆರೋಪವನ್ನು ಅವರ ಮಾಧ್ಯಮ ಸಲಹೆಗಾರ ತಳ್ಳಿಹಾಕಿದ್ದಾರೆ.
''ಇದು ಸಂಪೂರ್ಣ ಸುಳ್ಳು ವರದಿಯಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ ಎಂದು ಸಿಎನ್ ಎನ್ ಐಬಿಎನ್ ವರದಿ ಮಾಡಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿರುವಂತೆ ಪನಾಮಾ ಪೇಪರ್ಸ್ ಹಗರಣದಲ್ಲಿ 500 ಮಂದಿ ಭಾರತೀಯರ ಹೆಸರು ಇದ್ದು ಅವರಲ್ಲಿ ಪ್ರಮುಖ ನಟರು, ಉದ್ಯಮಿಗಳು, ರಾಜಕಾರಣಿಗಳ ಹೆಸರು ಸೇರಿಕೊಂಡಿವೆ.