ಥಳಿತಕ್ಕೊಳಗಾದ ದಲಿತ ಬಾಲಕರು (ಚಿತ್ರಕೃಪೆ: ಟ್ವಿಟರ್) 
ದೇಶ

ಬೆತ್ತಲೆಗೊಳಿಸಿ ಅಪ್ರಾಪ್ತ ದಲಿತ ಬಾಲಕರಿಗೆ ಥಳಿತ: 6 ಬಂಧನ

ಮೇಲ್ಜಾತಿ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಅಪ್ರಾಪ್ತ ಬಾಲಕರನ್ನು ರಸ್ತೆ ಮಧ್ಯದಲ್ಲೇ ಅಮಾನವೀಯವಾಗಿ...

ಚಿತ್ತೋರಗಢ್: ಮೇಲ್ಜಾತಿ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಅಪ್ರಾಪ್ತ ಬಾಲಕರನ್ನು ರಸ್ತೆ ಮಧ್ಯದಲ್ಲೇ ಅಮಾನವೀಯವಾಗಿ ಥಳಿಸಿರುವ ಘಟನೆ ಚಿತ್ತೋರಗಢ್ ನ ಬಸ್ಸಿ ತೆಹ್ಸೀಲ್ ನಲ್ಲಿ ಮಂಗಳವಾರ ನಡೆದಿದೆ.

ಬೈಕ್ ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಬಾಲಕರ ಮೇಲೆ ಮುಗಿ ಬಿದ್ದಿದ್ದ ಅಲ್ಲಿನ ಸ್ಥಳೀಯರು, ಬಾಲಕರನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಆಕ್ರೋಶಿತ ಜನರ ಥಳಿತದಿಂದ ನೋವಿನಿಂದ ಚೀರುತ್ತಿದ್ದ ಬಾಲಕರು ಸಹಾಯಕ್ಕಾಗಿ ಮೊರೆ ಇಟ್ಟರಾದರೂ ಯಾರೊಬ್ಬರು ಅವರನ್ನು ಬಿಡಿಸುವ ಪ್ರಯತ್ನವನ್ನು ಮಾಡಿಲ್ಲ.

ಅಲ್ಲದೆ, ಘಟನೆ ಸಂಬಂಧ ಥಳಿಕ್ಕೊಳಗಾದ ಬಾಲಕರ ವಿರುದ್ಧವೇ ಸ್ಥಳೀಯರು ಪೊಲೀಸರ ಬಳಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಎಸ್'ಸಿ/ಎಸ್'ಟಿ ಕಾಯ್ದೆ ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT