ಸುಪ್ರೀಂಕೋರ್ಟ್ ಮತ್ತು ಮ್ಯಾಗಿ ನೂಡಲ್ಸ್ 
ದೇಶ

ಮ್ಯಾಗಿ ವಿವಾದ: ಸುಪ್ರೀಂಗೆ ವರದಿ ಸಲ್ಲಿಸಿದ ಮೈಸೂರು ಪ್ರಯೋಗಾಲಯ

ನಿಷೇಧ ತೆರವಿನ ನಂತರ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಮ್ಯಾಗಿ ನ್ಯೂಡಲ್ಸ್ ನ್ನು ಮರುಪರೀಕ್ಷೆ ಮಾಡುವಂತೆ ತಿಳಿಸಿದ್ದ ಸುಪ್ರೀಂನ ಸೂಚನೆಯಂತೆಯೇ ಇದೀಗ ಕರ್ನಾಟಕದ ಮೈಸೂರು...

ನವದೆಹಲಿ: ನಿಷೇಧ ತೆರವಿನ ನಂತರ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಮ್ಯಾಗಿ ನ್ಯೂಡಲ್ಸ್ ನ್ನು ಮರುಪರೀಕ್ಷೆ ಮಾಡುವಂತೆ ತಿಳಿಸಿದ್ದ ಸುಪ್ರೀಂನ ಸೂಚನೆಯಂತೆಯೇ ಇದೀಗ ಕರ್ನಾಟಕದ ಮೈಸೂರು ಪ್ರಯೋಗಾಲಯವು ಸುಪ್ರೀಂಕೋರ್ಟ್ ಗೆ ಮಂಗಳವಾರ ವರದಿ ಸಲ್ಲಿಸಿದೆ.

ಮ್ಯಾಗಿ ವಿವಾದ ಕುರಿತಂತೆ ಇಂದು ಸುಪ್ರೀಂನಲ್ಲಿ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಮೈಸೂರು ಪ್ರಯೋಗಾಲಯ ತನ್ನ ವರದಿಯನ್ನು ಸುಪ್ರೀಂಗೆ ಸಲ್ಲಿಸಿದೆ. ಈ ವೇಳೆ ಮಾತನಾಡಿರುವ ನೆಸ್ಲೆ ಕಂಪನಿಯು ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿರುವ ಮ್ಯಾಗಿಯಲ್ಲಿ ಗ್ಲುಟಮೇಟ್ (ಎಂಎಸ್ ಜಿ) ಇರುವುದಾಗಿ ವರದಿಗಳು ತಿಳಿಸಿಲ್ಲ ಎಂದು ಆಹಾರ ಇಲಾಖೆ ಒಪ್ಪಿಕೊಂಡಿದೆ. ನೆಸ್ಲೆ ಕಂಪನಿ ತನ್ನ ಗುಣಮಟ್ಟವನ್ನು ಉಳಿಸಿಕೊಂಡು ಬರುತ್ತಿದೆ ಎಂದು ಹೇಳಿದೆ. ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.

ಈ ಹಿಂದಷ್ಟೇ ವಿಷಕಾರಿ ಅಂಶ ಪತ್ತೆಯಾಗಿ ನಿಷೇಧಕ್ಕೆ ಒಳಗಾಗಿದ್ದ ನೆಸ್ಲೆ ಸಂಸ್ಥೆ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧ ತೆರವಿನ ಬಳಿಕ ನೂತನವಾಗಿ ಮಾರುಕಟ್ಟೆಗೆ ಬಂದಿರುವ ಮ್ಯಾಗಿ ನ್ಯೂಡಲ್ಸ್'ನ ಮರುಪರೀಕ್ಷೆ ವರದಿಯನ್ನು 8 ವಾರದೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಮೈಸೂರು ಲ್ಯಾಬೋರೇಟರಿಗೆ ಸೂಚನೆ ನೀಡಿತ್ತು.

ನೆಸ್ಲೆ ಸಂಸ್ಥೆಯ ಖ್ಯಾತ ತಿನಿಸು ಮ್ಯಾಗಿ ನ್ಯೂಡಲ್ಸ್ ನಲ್ಲಿ ಸೀಸ ಮತ್ತು ಗ್ಲುಟಮೇಟ್ (ಎಂಎಸ್ ಜಿ) ಅಂಶ ಹೆಚ್ಚಿದೆ ಎಂಬ ಆರೋಪದಡಿಯಲ್ಲಿ ದೇಶದ ವಿವಿಧ ರಾಜ್ಯ ಸರ್ಕಾರಗಳು ಅದಕ್ಕೆ ನಿಷೇಧ ಹೇರಿದ್ದವು. ಅಲ್ಲದೆ ಮ್ಯಾಗಿ ನ್ಯೂಡಲ್ಸ್ ನ 16 ಸ್ಯಾಂಪಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ಎನ್ ಸಿ ಡಿಆರ್ ಸಿ ಆದೇಶ ಹೊರಡಿಸಿತ್ತು.

ಇದನ್ನು ನೆಸ್ಲೆ ಇಂಡಿಯಾ ಸಂಸ್ಥೆ ಪ್ರಶ್ನಿಸಿ ಕಾನೂನು ಸಮರಕ್ಕಿಳಿದಿತ್ತು. ಬಳಿಕ ಮ್ಯಾಗಿ ನ್ಯೂಡಲ್ಸ್ ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ನೆಸ್ಲೆ ಕಂಪನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಂತರ ಕೋರ್ಟ್  ಮ್ಯಾಗಿ ಮೇಲಿನ ನಿಷೇಧವನ್ನು ತೆರವುಗೊಳಿಸಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು  ನೆಸ್ಲೆ ಇಂಡಿಯಾಕ್ಕೆ ಈ ಹಿಂದೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.

ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಮೈಸೂರಿನಲ್ಲಿರುವ  ಲ್ಯಾಬೋರೇಟರಿಯಲ್ಲಿ ಮರುಪರೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು. ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಕೋರ್ಟ್ 8 ವಾರಗಳೊಳಗಾಗಿ ಮ್ಯಾಗಿಯ ಹೊಸ ಮಾದರಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT