ತ್ರಿಪುರಾ ರಾಜ್ಯಪಾಲ ತಥಾಗಥಾ ರಾಯ್
ತ್ರಿಪುರಾ: ತ್ರಿಪುರಾದಲ್ಲಿ ಮಾರ್ಕ್ಸಿಸಂ ಸತ್ತ ಕುದುರೆ ಎಂದು ಅಲ್ಲಿನ ರಾಜ್ಯಪಾಲ ತಥಾಗಥಾ ರಾಯ್ ಟ್ವೀಟ್ ಮಾಡಿದ್ದಾರೆ.
ಸತ್ತ ಕುದುರೆಯಂತಿರುವ ಮಾರ್ಕ್ಸಿಸಂಗೆ ಮತ್ತೆ ಜೀವ ಕೊಡಲು ಸಾಧ್ಯವಿಲ್ಲ ಎಂದು ಗವರ್ನರ್ ಟ್ವೀಟ್ ಮಾಡಿದ್ದರು.
ತ್ರಿಪುರಾದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರ ನಡೆಸುತ್ತಿದ್ದು, ಸಿಪಿಎಂನ ಹಿರಿಯ ನೇತಾರರು ರಾಜ್ಯಪಾಲರ ಟ್ವೀಟ್‌ನ್ನು ಖಂಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯಪಾಲರು ಯಾವುದೇ ಪಕ್ಷದ ಪರ ವಹಿಸಿ ಮಾತನಾಡಬಾರದು. ಅದೇ ವೇಳೆ ಮಾರ್ಕ್ಸಿಸ್ಟ್‌ಗಳಿಗ ರಾಜ್ಯಪಾಲರಿಂದ ಪ್ರಮಾಣ ಪತ್ರವೇನೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರು ಇಂಥಾ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲಬಾರಿಯೇನೂ ಅಲ್ಲ. ಈ ಹಿಂದೆ ಯಾಕೂಬ್ ಮೆಮನ್‌ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರ ಮೇಲೆ ಗುಪ್ತಚರ ಇಲಾಖೆ ನಿಗಾ ಇಡಬೇಕು. ಅಲ್ಲಿ ಭಾಗವಹಿಸಿದವರಲ್ಲಿ ಹಲವಾರು ಉಗ್ರರಿರಬಹುದು ಎಂದು ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು.