ಎಸಿ ಬಳಕೆ ಮಾಡಿದ್ದಕ್ಕೆ ಹೆಂಡತಿ ಮಗನನ್ನೇ ಕೊಂದ 85 ರ ವೃದ್ಧ! 
ದೇಶ

ಎಸಿ ಬಳಕೆ ಮಾಡಿದ್ದಕ್ಕೆ ಹೆಂಡತಿ ಮಗನನ್ನೇ ಕೊಂದ 85 ರ ವೃದ್ಧ!

ಎಸಿ ಬಳಕೆ ಮಾಡಿದ್ದಕ್ಕೆ ಕರೆಂಟ್ ಬಿಲ್ ಜಾಸ್ತಿಯಾಗುತ್ತದೆಂದು 85 ವರ್ಷದ ವೃದ್ಧನೊಬ್ಬ 74 ವರ್ಷದ ತನ್ನ ಪತ್ನಿ ಹಾಗೂ 54 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳ: ಎಸಿ ಬಳಕೆ ಮಾಡಿದ್ದಕ್ಕೆ ಕರೆಂಟ್ ಬಿಲ್ ಜಾಸ್ತಿಯಾಗುತ್ತದೆಂದು 85 ವರ್ಷದ ವೃದ್ಧನೊಬ್ಬ 74 ವರ್ಷದ ತನ್ನ ಪತ್ನಿ ಹಾಗೂ 54 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. 
ಪೌಲ್ ಎಂಬ ವ್ಯಕ್ತಿ ಪತ್ನಿ, ಮಗನನ್ನು ಹತ್ಯೆ ಮಾಡಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿರುವ ಪೌಲ್ ರೈಲ್ವೆ ಇಲಾಖೆ ಮಾಜಿ ನೌಕರನಾಗಿದ್ದು ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮನೆಯಲ್ಲಿ ನಡೆದ ಅವಗಢದ ಬಗ್ಗೆ ಕತಾರ್ ನಲ್ಲಿರುವ ತನ್ನ ಮತ್ತೋರ್ವ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಪೌಲ್ ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಪೌಲ್ ನ
ಮತ್ತೋರ್ವ ಮಗ ಹತ್ತಿರದಲ್ಲೆ ಇದ್ದ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಮನೆಯಲ್ಲಿ ಹೆಚ್ಚು ವಿದ್ಯುತ್ ಬಿಲ್ ಬರುತ್ತಿದ್ದ ಕಾರಣ ಪೌಲ್ ತನ್ನ ಪತ್ನಿ ಹಾಗೂ ಅನಾರೋಗ್ಯಕ್ಕೀಡಾಗಿದ್ದ ಮಗನಿಗೆ ಎಸಿಯನ್ನು ಹೆಚ್ಚು ಬಳಸದಂತೆ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆಯ ಹೊರತಾಗಿಯೂ ಎಸಿ ಬಳಸಿದ್ದಾರ  ಪರಿಣಾಮ ಮಗ ಹಾಗೂ ಪತ್ನಿಯ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಾದ ಬೆನ್ನಲ್ಲೇ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ವಯೋಸಹಜ ನಿಶಕ್ತಿಯಿಂದಾಗಿ ನೇಣುಬಿಗಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT