ಅನುಪಮ್ ಖೇರ್ 
ದೇಶ

ಅನುಪಮ್ ಖೇರ್ ಎನ್ ಐಟಿ ಭೇಟಿ ತಡೆದ ಶ್ರೀನಗರ ಪೊಲೀಸ್

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ ಐಟಿ)ಗೆ ಭೇಟಿ ನೀಡಲು ತೆರಳಿದ್ದ ಅನುಪಮ್ ಖೇರ್ ಅವರನ್ನು ಶ್ರೀನಗರ ಪೊಲೀಸರು ವಿಮಾನ...

ಶ್ರೀನಗರ: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ ಐಟಿ)ಗೆ ಭೇಟಿ ನೀಡಲು ತೆರಳಿದ್ದ ಅನುಪಮ್ ಖೇರ್ ಅವರನ್ನು ಶ್ರೀನಗರ ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದಿದ್ದಾರೆ. 
ಇತ್ತೀಚೆಗೆ ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ಸಂಘರ್ಷಣೆ ನಡೆದಿತ್ತು. ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಅನುಪಮ್ ಖೇರ್ ಶ್ರೀನಗರಕ್ಕೆ ತೆರಳಿದ್ದರು. 
ಆದರೆ, ಇದಕ್ಕೆ ಅಲ್ಲಿನ ಪೊಲೀಸರು ತಡೆ ನೀಡಿದ್ದಾರೆ. ಪರಿಸ್ಥಿತಿ ಸರಿಯಿಲ್ಲದ ಕಾರಣ ಭದ್ರತೆ ದೃಷ್ಟಿಯಿಂದ ನೀವು ದೆಹಲಿಗೆ ವಾಪಸ್ಸಾಗಬೇಕು ಎಂದು ಹೇಳಿ ಅನುಪಮ್ ಖೇರ್ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ತೆರಳಿದ್ದ ಅನುಪಮ್ ಖೇರ್ ಮತ್ತೆ ದೆಹಲಿಗೆ ವಾಪಸ್ಸಾಗಿದ್ದಾರೆ. ನಾನು ಎನ್ ಐಟಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕೆಂದಿದ್ದೇನೆ. ಜೊತೆಗೆ ಅವರಿಗೆ ಉಡುಗೊರೆಯನ್ನು ತಂದಿದ್ದೇನೆ. ಸಮಸ್ಯೆಯನ್ನು ಉಂಟು ಮಾಡಲು ಎನ್ ಐಟಿಗೆ ಭೇಟಿ ನೀಡುತ್ತಿಲ್ಲ ಎಂದು ಅನುಪಮ್ ಖೇರ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಮಾತುಗಳನ್ನು ಪೊಲೀಸರಿಗೆ ಹೇಳಿದೆ. ಜೊತೆಗೆ ನಿರ್ಬಂಧ ಹೇರಿರುವ ಬಗ್ಗೆ ಆದೇಶ ಪ್ರತಿ ತೋರಿಸಿ ಎಂದು ಕೂಡ ಕೇಳಿದೆ. ಆದರೆ ಅವರು ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಸಂಬಂಧಿಕರ ಮನೆ ಹಾಗೂ ಕೀರ್ ಭವಾನಿ ದೇವಾಲಯಕ್ಕೂ ಭೇಟಿ ನೀಡಲು ಅವಕಾಶ ನೀಡಲಿಲ್ಲ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!