ಅಮೃತಸರ: ಅಮೃತಸರದ ಬೈರೋವಾಲ್ ಪ್ರದೇಶದ ಅತ್ತಾರಿ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ ವ್ಯಕ್ತಿಯೊಬ್ಬನನ್ನು ಭಾರತದ ಗಡಿ ರಕ್ಷಣಾ ಪಡೆ (ಬಿಎಸ್‌ಎಫ್) ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ನುಸುಳುಕೋರರು ಭಾರತಕ್ಕೆ ನುಸುಳಲು ಯತ್ನಿಸಿದಾಗ ಬಿಎಸ್‌ಎಫ್ ಯೋಧರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬ ಹತನಾಗಿದ್ದು ಇನ್ನೊಬ್ಬನಿಗೆ ಗಾಯಗಳಾಗಿವೆ. ಗಾಯಾಳುವನ್ನು ಆತನ ಜತೆಗಿದ್ದವರು ಅಲ್ಲಿಂದ ಪಾಕಿಸ್ತಾನದತ್ತ ಕರೆದೊಯ್ದಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಪಾಕಿಸ್ತಾನದಿಂದ ನುಸುಳಲು ಯತ್ನಿಸಿ ಗುಂಡಿಗೆ ಬಲಿಯಾದ ಆ ವ್ಯಕ್ತಿಯ ಕೈಯಲ್ಲಿ 9 ಪ್ಯಾಕೆಟ್ ಹೆರೋಯಿನ್ (ಮಾದಕವಸ್ತು) ಪತ್ತೆಯಾಗಿದೆ ಎಂದು ಬಿಎಸ್‌ಎಫ್ ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics