ಕೊಲ್ಲಂ: ಕೇರಳದ ಕೊಲ್ಲಂನ ಮೂಕಾಂಬಿಕ ದೇಗುಲದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತ ಪ್ರಕರಣವನ್ನು ಭಾನುವಾರ ಕೇರಳ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇರಳ ಗೃಹ ಸಚಿವ ರಮೇಶ್ ಚೆನ್ನಿತಲ ಅವರು, ಗಾಯಾಳುಗಳಿಗೆ ಹಾಗೂ ಸಾವನ್ನಪ್ಪಿದ್ದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ತಯಾರಿದ್ದು, ಘಟನೆಯನ್ನು ಶೀಘ್ರದಲ್ಲೇ ನ್ಯಾಯಾಂಗ ತನಿಖೆಗೆ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೊಲ್ಲಂ ಜಿಲ್ಲೆಯಲ್ಲಿನ ಪಾರವೂರ್ ನಲ್ಲಿರುವ ಮೂಕಾಂಬಿಕ ದೇಗುಲದಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಗುತ್ತಿತ್ತು. ಪ್ರತೀ ಬಾರಿಯಂತೆ ಈ ಬಾರಿಯೂ ದೇಗುಲದಲ್ಲಿ ಬಾಣಬಿರುಸುಗಳ ಪ್ರದರ್ಶನದ ನಡೆಸಲಾಗಿದೆ. ಆದರೆ, ಆಕಾಶದಲ್ಲಿ ಹಾರುವ ಬದಲು ಪಟಾಕಿಗಳು ನೆಲದಲ್ಲೇ ಸಿಡಿದ ಪರಿಣಾಮ ಘಟನೆಯಲ್ಲಿ 85ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Subscribe and Receive exclusive content and updates on your favorite topics