ಭಯೋತ್ಪಾದನೆ ನಡುವೆಯೂ ಪಾಕ್ ತನಿಖಾ ತಂಡಕ್ಕೆ ಎನ್ಐಎ ಯಿಂದ ಬಿರ್ಯಾನಿ ಔತಣ! 
ದೇಶ

ಭಯೋತ್ಪಾದನೆ ನಡುವೆಯೂ ಪಾಕ್ ತನಿಖಾ ತಂಡಕ್ಕೆ ಎನ್ಐಎ ಯಿಂದ ಬಿರ್ಯಾನಿ ಔತಣ!

ಭಾರತಕ್ಕೆ ಆಗಮಿಸಿದ್ದ ಪಾಕ್ ತನಿಖಾ ತಂಡಕ್ಕೆ ಎನ್ಐಎ ಬಿರ್ಯಾನಿ ಸೇರಿದಂತೆ ಭೂರಿ ಭೋಜನದ ಔತಣ ನೀಡಿರುವುದು ಬಹಿರಂಗವಾಗಿದೆ.

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ಪಾಕ್ ಭಯೋತ್ಪಾದಕರ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿದ್ದ ಪಾಕ್ ತನಿಖಾ ತಂಡಕ್ಕೆ ಎನ್ಐಎ ಬಿರ್ಯಾನಿ ಸೇರಿದಂತೆ ಭೂರಿ ಭೋಜನದ ಔತಣ ನೀಡಿರುವುದು ಬಹಿರಂಗವಾಗಿದೆ.
ಪಾಕಿಸ್ತಾನದ ತನಿಖಾ ತಂಡ ಕೇಳಿದ ಪ್ರತಿಬಾರಿಯೂ, ದೆಹಲಿ ಕರೀಮ್ಸ್ ನ ಜಹಂಗೀರಿ ಕುರ್ಮಾ, ತಂದೂರಿ ಬುರ್ರ, ರೋಘ್ನಿ ನಾನ್, ಖಮೀರಿ ರೋಟಿ, ಲಕ್ಷ್ಮಿ ನಗರ್ ನ ಹೀರಾ ಸ್ವೀಟ್ಸ್ ನಿಂದ ಸಿಹಿ ತಿನಿಸುಗಳ ಅದ್ಧೂರಿ ಔತಣ ನೀಡಲಾಗಿದೆ. ದೆಹಲಿಗೆ ಆಗಮಿಸಿದ ಮೊದಲ ದಿನ ಪಾಕ್ ತನಿಖಾ ತಂಡಕ್ಕೆ ಐಟಿಸಿ ಮೌರ್ಯ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಪಾಕ್ ತನಿಖಾ ತಂಡದ ಸದಸ್ಯರು ತಂದೂರಿ ಚಿಕನ್, ದಾಲ್ ಬುಖಾರ ಸೇರಿದಂತೆ ವಿವಿಧ ರೀತಿಯ ಉತ್ತರ ಭಾರತ ಶೈಲಿಯ ಭೋಜನ ಸೇವಿಸಿದ್ದಾರೆ. 
ಎರಡನೇ ದಿನ ಎನ್ಐಎ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಪಾಕ್ ತನಿಖಾ ತಂಡವನ್ನು ಮಧ್ಯಾಹ್ನದ ಊಟಕ್ಕಾಗಿ  ಶಂಗ್ರಿ ಲಾ ಹೋಟೆಲ್ ಗೆ ಕರೆದೊಯ್ಯಲಾಗಿದ್ದು, ಪಾಕ್ ತನಿಖಾ ತಂಡ ತಂದೂರಿ ಹಾಗೂ ಮಟನ್ ಖಾದ್ಯಗಳನ್ನು ಸವಿದಿದೆ. ಇನ್ನು ಮೂರನೇ ದಿನ ಕರೀಮ್ಸ್ ರೆಸ್ಟೋರೆಂಟ್ ನಿಂದ ತರಿಸಲಾಗಿದ್ದ ಖಾದ್ಯಗಳನ್ನು ನೀಡಲಾಗಿದೆ ಎಂದು ಹಿರಿಯ ಎನ್ಐಎ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಡೇ ಸ್ಟಾಂಡರ್ಡ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!