ರಾಬರ್ಟ್ ವಾದ್ರಾ 
ದೇಶ

ನಾನು ಪ್ರಿಯಾಂಕ ಮೇಲೆ ಅವಲಂಬಿತನಾಗಿಲ್ಲ: ರಾಬರ್ಟ್ ವಾದ್ರಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ತಾವು ಭವಿಷ್ಯದಲ್ಲಿ ರಾಜಕೀಯ ಸೇರುವ ಬಗ್ಗೆ ಗುರುವಾರ ಸುಳಿವು ...

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ತಾವು ಭವಿಷ್ಯದಲ್ಲಿ ರಾಜಕೀಯ ಸೇರುವ ಬಗ್ಗೆ ಗುರುವಾರ ಸುಳಿವು ನೀಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ರಾಬರ್ಟ್ ವಾದ್ರಾ, 'ನನಗೆ ಜನರಿಗಾಗಿ ಕೆಲಸ ಮಾಡಬೇಕು ಅಂತ ಅನಿಸಿದಾಗ, ಆ ಸವಾಲನ್ನು ಸ್ವೀಕರಿಸುತ್ತೇನೆ ಮತ್ತು ರಾಜಕೀಯ ಸೇರುವ ಬಗ್ಗೆ ಚಿಂತನೆ ನಡೆಸುತ್ತೇನೆ. ಆದರೆ ಯಾವತ್ತೂ ರಾಜಕೀಯಕ್ಕೆ ಬರಲ್ಲ ಅಂತ ಹೇಳಲ್ಲ. ಮುಂದೆ ನೋಡೋಣ' ಎಂದಿದ್ದಾರೆ.
ನನಗೂ ನನ್ನ ಕುಟುಂಬದ ಬೆಂಬಲ ಇರುವುದರಿಂದ ವ್ಯವಹಾರ ಮತ್ತು ರಾಜಕೀಯ ಎರಡನ್ನೂ ನಿಭಾಯಿಸುವ ಸಾಮರ್ಥ್ಯ ನನಗೆ ಇದೆ. ನನ್ನ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ನಾನು ಪ್ರಿಯಾಂಕ ಗಾಂಧಿಯ ಮೇಲೆ ಅವಲಂಬಿತನಾಗಿಲ್ಲ. ನನಗೂ ಸಾಕಷ್ಟು ಆಸ್ತಿ ಇದೆ. ನನಗಾಗಿ ನನ್ನ ತಂದೆ ಸಾಕಷ್ಟು ಮಾಡಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸ್ಥಿರವಾಗಿ ನಿಲ್ಲುವಷ್ಟು ನಾನು ಶಿಕ್ಷಣ ಪಡೆದಿದ್ದೇನೆ. ಹೀಗಾಗಿ ನನಗೆ ಯಾರ ಬೆಂಬಲದ ಅಗತ್ಯ ಇಲ್ಲ ಎಂದಿದ್ದಾರೆ.
ಇದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಬಗ್ಗೆ ಪ್ರತಿಕ್ರಿಸಿದ ವಾದ್ರಾ, ರಿಯಲ್ ಎಸ್ಟೇಟ್ ನಂತಹ ವ್ಯವಹಾರದಲ್ಲಿರುವ ಹಲವು ಜನರಿಗೆ ಕೇಂದ್ರದ ನಿರ್ಧಾರಗಳ ಬಗ್ಗೆ ಬೇಸರ ಇದೆ. ಇನ್ನುಮುಂದೆ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದರು.
ವಾದ್ರಾ ಮಾಲೀಕತ್ವದ ಡಿಎಲ್ಎಫ್ ರಿಯಲ್ ಎಸ್ಟೇಟ್ ಕಂಪನಿ ಹರಿಯಾಣದಲ್ಲಿ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್