ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ಬಿಎ ಡಿಗ್ರಿ ಸಂಬಂಧ ಮಾಹಿತಿ ನೀಡದ ದೆಹಲಿ ವಿವಿ

ನರೇಂದ್ರ ಮೋದಿ ಅವರ ಬಿಎ ಪದವಿ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಲು ದಿಲ್ಲಿ ವಿಶ್ವವಿದ್ಯಾಲಯ ನಿರಾಕರಿಸಿದೆ. ಕ್ರಮಸಂಖ್ಯೆ ಇಲ್ಲದ...

ನರೇಂದ್ರ ಮೋದಿ
Shilpa D
Updated On : 14 Apr 2016, 5:03 am

ನವದೆಹಲಿ: ನರೇಂದ್ರ ಮೋದಿ ಅವರ ಬಿಎ ಪದವಿ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಲು ದಿಲ್ಲಿ ವಿಶ್ವವಿದ್ಯಾಲಯ ನಿರಾಕರಿಸಿದೆ. ಕ್ರಮಸಂಖ್ಯೆ ಇಲ್ಲದ ಕಾರಣ ಈ ಸಂಬಂಧ ಮಾಹಿತಿ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡದ್ದಕ್ಕೆ ವಿಶ್ವವಿದ್ಯಾಲಯ ಕಾರಣ ನೀಡಿದೆ.

ಚುನಾವಣಾ ಅಫಿಡವಿಟ್‌ ಪ್ರಕಾರ, 1978ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್ ಮೂಲಕ ಪ್ರಧಾನಿ ಬಿಎ ಪದವಿ ಪಡೆದಿದ್ದಾರೆ. ಪ್ರಧಾನಿಯ ಶೈಕ್ಷಣಿಕ ಅರ್ಹತೆ ಕುರಿತು ಹಲವು ಬಾರಿ ಮಾಹಿತಿ ಕೇಳಲಾಗಿದೆ.

ಈ ಮೊದಲು ಗುಜರಾತ್‌ ವಿಶ್ವವಿದ್ಯಾಲಯ, ಅಂಕಪಟ್ಟಿ ಹಾಗೂ ಇನ್ನಿತರ ವಿವರಗಳು ಖಾಸಗಿ ಮಾಹಿತಿ ಎಂಬ ಕಾರಣ ನೀಡಿ ಪ್ರಧಾನಿಯ ಸ್ನಾತಕೋತ್ತರ ಪದವಿ ಕುರಿತ ಮಾಹಿತಿ ನೀಡಲು ನಿರಾಕರಿಸಿತ್ತು. ಪ್ರಧಾನಿಯ ಸ್ನಾತಕೋತ್ತರ ಪದವಿ ಕುರಿತು ಪ್ರಧಾನಿ ಕಚೇರಿಗೂ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು.

ದಿಲ್ಲಿ ನಿವಾಸಿ ಹನ್ಸ್‌ ರಾಜ್,  1978ನೇ ಸಾಲಿನಲ್ಲಿ ನರೇಂದ್ರ ಮೋದಿ ಎಂಬ ಹೆಸರಿನ ಎಷ್ಟು ಮಂದಿ ತೇರ್ಗಡೆ ಹೊಂದಿದ್ದರು ಎಂಬ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments