ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮತ್ತು ಮುಖವಾಣಿ ದಬಿಕ್ (ಸಂಗ್ರಹ ಚಿತ್ರ) 
ದೇಶ

ಹಿಂದುಗಳ ನಾಶಕ್ಕೆ ಭಾರತದಲ್ಲಿ ಐಸಿಸ್ ಗೆರಿಲ್ಲಾ ದಾಳಿ!

ಭಾರತದಲ್ಲಿರುವ ಹಿಂದೂಗಳನ್ನು ಸರ್ವನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ...

ನವದೆಹಲಿ: ಭಾರತದಲ್ಲಿರುವ ಹಿಂದೂಗಳನ್ನು ಸರ್ವನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ  ಇಸಿಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ನೆರವಿನೊಂದಿಗೆ ಭಾರತದ ಮೇಲೆ ಗೆರಿಲ್ಲಾ ದಾಳಿ ನಡೆಸಿ ಹಿಂದುಗಳ ಸರ್ವನಾಶ ಮಾಡುವುದಾಗಿ ಇಸ್ಲಾಮಿಕ್ ಸ್ಟೇಟ್  (ಐಸಿಸ್) ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ. ತನ್ನ ಮುಖವಾಣಿ ಆನ್ಲೈನ್ ಮ್ಯಾಗಜೀನ್ ‘ದಬಿಕ್’ಗೆ ಸಂದರ್ಶನ ನೀಡಿರುವ ಐಸಿಸ್ ನ ಬಾಂಗ್ಲಾದೇಶ ಘಟಕದ ಮುಖ್ಯಸ್ಥ ಶೇಖ್ ಅಬು ಇಬ್ರಾಹಿಂ  ಅಲ್ ಹನೀಫ್ ಈ ಬಗ್ಗೆ ಹೇಳಿಕೊಂಡಿದ್ದು, ಭಾರತದಲ್ಲಿ ಷರಿಯಾ ಕಾನೂನು ಜಾರಿಗೊಳಿಸವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾನೆ. ಇದಕ್ಕಾಗಿ ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಮಾಡಲು  ನಾವು ಸಜ್ಜಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಇತರೆ ಉಗ್ರಗಾಮಿ ಸಂಘಟನೆಗಳ ನೆರವು ಕೂಡ ಪಡೆಯುತ್ತೇವೆ ಎಂದು ಹೇಳಿದ್ದಾನೆ.

ಭಾರತದಲ್ಲಿರುವ ಧರ್ಮಗಳ ನಡುವೆ ಬಿರುಕು ಮೂಡಿಸಿ ಅಲ್ಲ ಗಲಭೆ ಎಬ್ಬಿಸಿದರೆ ನಮ್ಮ ಗುರಿಯನ್ನು ನಾವು ಸುಲಭವಾಗಿ ತಲುಪಬಹುದು ಎಂದು ಹೇಳಿರುವ ಉಗ್ರ ಹನೀಫ್, ತನ್ನ ಉಗ್ರರಿಗೆ  ಭಾರತದಲ್ಲಿ ಸಂಘಟನೆಯನ್ನು ಪಸರಿಸಲು ಸೂಚನೆ ನೀಡಿದ್ದಾನೆ. ಅಗತ್ಯ ಬಿದ್ದರೆ ಇದಕ್ಕಾಗಿ ಬಾಂಗ್ಲಾದೇಶದ ಉಗ್ರರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾನೆ.

ಬಾಂಗ್ಲಾದೇಶವನ್ನು ‘ಬೆಂಗಾಲ್’ ಎಂದು ಕರೆದಿರುವ ಈತ, ಭಾರತದ ಮೇಲೆ ದಾಳಿ ನಡೆಸಲು ಸೂಕ್ತ ಕಾರ್ಯತಂತ್ರ ಅಗತ್ಯವಿದೆ ಎಂದಿದ್ದಾನೆ. ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ  ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆ ವಿಲಾಯತ್ ಖುರಾಸನ್ ಮತ್ತು ಸ್ಥಳೀಯರ ನೆರವಿನೊಂದಿಗೆ ಭಾರತದ ಮೇಲೆ ದಾಳಿ ನಡೆಸಿ ಎಲ್ಲ ಹಿಂದುಗಳನ್ನು ನಾಶಗೊಳಿಸಿ, ಷರಿಯಾ  ಕಾನೂನನ್ನು ಜಾರಿಗೆ ತರಲಿದ್ದೇವೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ತರಬೇತಿ ಪಡೆದಿರುವ ಉಗ್ರರು ಗೆರಿಲ್ಲಾ ದಾಳಿ ನಡೆಸಲಿದ್ದಾರೆ ಎಂದು ಹನೀಫ್ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!