ವಿವಾದ ಹೊತ್ತಿಸಿರುವ ಪೋಸ್ಟರ್ 
ದೇಶ

ಶಾಸಕರ ಖರೀದಿಗೆ ಯತ್ನ: ಉತ್ತರಾಖಂಡದಲ್ಲಿ ಅಮಿತ್ ಶಾ ಪೋಸ್ಟರ್ ವಿವಾದ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೂವರು ಶಾಸಕರ ಖರೀದಿಗೆ ಪ್ರಯತ್ನಿಸುತ್ತಿ ರುವ ಪೋಸ್ಟರ್ ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ...

ಡೆಹ್ರಾಡೂನ್: ವಾರಾಣಾಸಿಯಲ್ಲಿ ಬಿಜೆಪಿಯ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಕೃಷ್ಣ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಮಾಯಾವತಿ ಕೌರವರು ಎಂದು ಬಿಂಬಿಸಿದ್ದ ಪೋಸ್ಟರ್ ಕಾಣಿಸಿಕೊಂಡ ಮರುದಿನ ಉತ್ತರಾಖಂಡದಲ್ಲಿ ಅಮಿತ್ ಶಾ ಅವರ ವಿವಾದತ್ಮಕ ಪೋಸ್ಟರ್ ಕಾಣಿಸಿಕೊಂಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೂವರು ಶಾಸಕರ ಖರೀದಿಗೆ ಪ್ರಯತ್ನಿಸುತ್ತಿ ರುವ ಪೋಸ್ಟರ್ ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿಯನ್ನು ಗುರಿಯಾಗಿಸಿ ಕಾಂಗ್ರೆಸ್‌ ನಡೆಸಿರುವ ಕೀಳು ತಂತ್ರ ಇದು ಎಂದು ಬಿಜೆಪಿ  ಆರೋಪಿಸಿದೆ.

ಈ ಪೋಸ್ಟರ್ ಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಸಮರ್ಥನೆ ನೀಡಿದೆ. ಆದರೆ ಪೋಸ್ಟರ್‌ನಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಪ್ರಕಟಿಸಿದೆ ಎಂದು ಅದು ಹೇಳಿದೆ.

ಪೋಸ್ಟರ್‌ನಲ್ಲಿ ಶಾ ಅವರು ಉತ್ತರಾಖಂಡ ಕಾಂಗ್ರೆಸ್‌ನ ಒಂಬತ್ತು ಬಂಡುಕೋರ ಶಾಸಕರ ಮುಖ ಹೊಂದಿರುವ ಒಂಬತ್ತು ಕುರಿಗಳನ್ನು ಹಗ್ಗದೊಂದಿಗೆ ಹಿಡಿದಿದ್ದು, ಹಣ ತುಂಬಿದ ಚೀಲ ಹೆಗಲಲ್ಲಿ ಇದೆ. ಬಿಜೆಪಿಗೆ ಮೂರು ಶಾಸಕರ ಅಗತ್ಯವಿದ್ದು ಖರೀದಿಸುವುದಾಗಿ ಶೀರ್ಷಿಕೆ ಕೂಡ ಹಾಕಿರುವುದು ಭಾರೀ ವಿವಾದ ಹುಟ್ಟು ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಲಿವುಡ್ ನ ಹಿರಿಯ ದಿಗ್ಗಜ ನಟ ಧರ್ಮೇಂದ್ರ ಇನ್ನಿಲ್ಲ, 'ಹೀಮ್ಯಾನ್' ಕಳೆದುಕೊಂಡ ಭಾರತೀಯ ಚಿತ್ರರಂಗ!

370ನೇ ವಿಧಿ ರದ್ದತಿ, SIR ಬಗ್ಗೆ ತೀರ್ಪು: 53ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್!

ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ಡಿಕೆ ಶಿವಕುಮಾರ್ ಒಪ್ಪಿಕೊಳ್ಳಬೇಕು: ಸಿದ್ದರಾಮಯ್ಯ

"ನಮ್ಮ ಬೇರು ಅರಬ್, ಟರ್ಕಿಯದ್ದಲ್ಲ": ಭಾರತದೊಂದಿಗೆ ಸೇರಲು ಸಿದ್ಧ; ಸಿಂಧ್ ನಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ; ರಾಜನಾಥ್ ಹೇಳಿಕೆಗೆ ವ್ಯಾಪಕ ಬೆಂಬಲ!

ಪುರಿ ಜಗನ್ನಾಥ ದೇಗುಲದಲ್ಲಿ ಪವಾಡ?: ತಂದೆಯ ಪ್ರಾರ್ಥನೆ ಬಳಿಕ ಕಣ್ಣು ಬಿಟ್ಟ ಕೋಮದಲ್ಲಿದ್ದ ಬಾಲಕ!, Video

SCROLL FOR NEXT