ಪ್ರಿಯಾಂಕಾ ಗಾಂಧಿ ವಾದ್ರಾ 
ದೇಶ

ವಾಜಪೇಯಿ ಸರ್ಕಾರವೇ ಬಾಡಿಗೆ ಕಡಿತ ಮಾಡಿದ್ದು: ಪ್ರಿಯಾಂಕಾ ಗಾಂಧಿ

ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಸರ್ಕಾರಿ ಬಂಗಲೆಗೆ ಇತರರು ನೀಡುತ್ತಿದ್ದಷ್ಟೇ ಬಾಡಿಗೆ ಹಣವನ್ನು ತಾನು ನೀಡಿದ್ದೇನೆ. ಬಾಡಿಗೆ...

ನವದೆಹಲಿ: ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಸರ್ಕಾರಿ ಬಂಗಲೆಗೆ ಇತರರು ನೀಡುತ್ತಿದ್ದಷ್ಟೇ ಬಾಡಿಗೆ ಹಣವನ್ನು ತಾನು ನೀಡಿದ್ದೇನೆ. ಬಾಡಿಗೆ ಕಡಿಮೆ ಮಾಡುವಂತೆ ತಾನು ಅಂದಿನ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.

2002ರಲ್ಲಿ ಬಿಜೆಪಿ ಸರ್ಕಾರ ಬಂಗಲೆಗಳ ಬಾಡಿಗೆಯನ್ನು ಶೇ.90ರಷ್ಟು ಹೆಚ್ಚಳ ಮಾಡಿತ್ತು. ಇದು ಎಲ್ಲಾ ಬಂಗಲೆಗಳಿಗೂ ಅನ್ವಯವಾಗಿತ್ತು. ವಾಸವಿದ್ದ ಎಲ್ಲರೂ ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಬಳಿಕ ಸರ್ಕಾರ ಬಾಡಿಗೆ ಕಡಿಮೆ ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.

1996ರಲ್ಲಿ ಖಾಸಗಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೆ. ಆದರೆ ಭದ್ರತೆ ದೃಷ್ಟಿಯಿಂದ ಸರ್ಕಾರಿ ಬಂಗಲೆಯಲ್ಲಿ ವಾಸಿಸುವಂತೆ ಸೂಚನೆ ಬಂದಿತ್ತು. ಈ ಸಂಬಂಧ ಎಲ್ಲ ಶುಲ್ಕ, ಬಾಡಿಗೆಗಳನ್ನು ಪಾವತಿಸಲಾಗಿದೆ. ಬಾಡಿಗೆಯನ್ನು ಸರ್ಕಾರವೇ ನಿಗದಿಪಡಿಸುತ್ತದೆ. ಆ ಬಾಡಿಗೆ ದರ ನನ್ನಂತೆ ವಾಸಿಸುವ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಈ ನಡುವೆ, ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ, ಹಿಮಾಚಲಪ್ರದೇಶದಲ್ಲಿ ಬಂಗಲೆ ಕಟ್ಟಿಸಲು ಸಾಧ್ಯವಾಗಿರುವ, ವಿದೇಶ ಪ್ರಯಾಣ ಮಾಡುವ ಪ್ರಿಯಾಂಕಾ ಅವರಿಗೆ ಬಾಡಿಗೆ ಕಟ್ಟುವ ಶಕ್ತಿ ಇಲ್ಲ ಎನ್ನುವುದು ನಗೆಪಾಟಲಿನ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!