ಪಶ್ಚಿಮ ಬಂಗಾಳ 2ನೇ ಹಂತದ ಚುನಾವಣೆ: ಶೇ.55.94 ರಷ್ಟು ಮತದಾನ 
ದೇಶ

ಪಶ್ಚಿಮ ಬಂಗಾಳ 2ನೇ ಹಂತದ ಚುನಾವಣೆ: ಶೇ.55.94 ರಷ್ಟು ಮತದಾನ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಾನುವಾರ ಎರಡನೇ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು, ಈ ವರೆಗೂ ಶೇ. 55.94ರಷ್ಟು ಮತದಾನವಾಗಿರುವುದಾಗಿ...

ಬಿರ್ಭುಮ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಾನುವಾರ ಎರಡನೇ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು, ಈ ವರೆಗೂ ಶೇ. 55.94ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.

ಪಶ್ಚಿಮ ಬಂಗಾಳದ 56 ಕ್ಷೇತ್ರಗಳಿಗೆ 2ನೇ ಹಂತದ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ 1.22 ಕೋಟಿ (1,21,74,947) ಮತದಾರರು ಪಾಲ್ಗೊಳ್ಳಲಿದ್ದಾರೆ, ಇನ್ನು ಮೂಲಗಳ ಪ್ರಕಾರ ಈಗಾಗಲೇ 21 ಲಕ್ಷ ಮಂದಿ ಈಗಾಗಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆಂದು ತಿಳಿದುಬಂದಿದೆ.

ಮತದಾನ ಪ್ರಕ್ರಿಯೆಗೆ 13,645 ಮತಗಟ್ಟೆಗಳನ್ನು ನಿಯೋಜಿಸಲಾಗಿದ್ದು ಇಂದು ನಡೆಯುತ್ತಿರುವ ಮತದಾನದಲ್ಲಿ 33 ಮಹಿಳೆಯರು ಸೇರಿದಂತೆ 383 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಅಲಿಪುರದೌರ್ ಜಿಲ್ಲೆಯ 5 ಕ್ಷೇತ್ರಗಳು, ಜಲ್ಪೈಗುರಿ 7, ಉತ್ತರ ದೀನಜ್ಪುರ 9, ಡಾರ್ಜಿಲಿಂಗ್ 6, ದಕ್ಷಿಣ ದೀನಜ್ಪುರ 6, ಮಾಲ್ಡಾದ 12 ಹಾಗೂ ದಕ್ಷಿಣ ಬಂಗಾಳ ಜಿಲ್ಲೆದ 11 ಕ್ಷೇತ್ರಗಳಿಗೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 1 ತಿಂಗಳ ಕಾಲ ಈ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 4 ಮತ್ತು 11 ರಂದು ಎರಡು ದಿನಗಳು ನಡೆದ ಚುನಾವಣೆಯಲ್ಲಿ 294 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಅಂತಿಮಗೊಂಡಿದೆ. ಇಂದು ಕೂಡ 56 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಏ.21, 25, 30 ಹಾಗೂ ಮೇ 5 ರಂದು ಉಳಿದ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

2011ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಜೊತೆ ಕಾಂಗ್ರೆಸ್ ಕೈ ಜೋಡಿಸಿತ್ತು. ಅಂದು ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ 34 ವರ್ಷಗಳ ಎಡಪಕ್ಷಗಳ ಆಳ್ವಿಕೆ ಅಂತಿಮಗೊಂಡಿತ್ತು. ನಂತರ ದಿನಗಳಲ್ಲಿ ಟಿಎಂಸಿ ಪಕ್ಷದ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಕಡಿದುಕೊಂಡಿತ್ತು. ಇದೀಗ ಎಡಪಕ್ಷಗಳ ಜೊತೆ ಕೈಜೋಡಿಸಿರುವ ಕಾಂಗ್ರೆಸ ಪಕ್ಷ ಮೈತ್ರಿ ಮಾಡಿಕೊಂಡು ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ-ಪಾಕ್ ಯುದ್ಧದ ಸಮಯದಲ್ಲಿ 11 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು: ಟ್ರಂಪ್ ಹೊಸ ಬಾಂಬ್!

ರಾಜತಾಂತ್ರಿಕತೆಗಿಂತ ದೊಡ್ಡ ಆಯುಧವಿಲ್ಲ, ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಕ್ಕೆ ಶಾಂತಿಯುತ ಮಾತುಕತೆಯೇ ಏಕೈಕ ಮಾರ್ಗ: ಪ್ರಧಾನಿ ಮೋದಿ

ಶೇ.50ರಷ್ಟು ರಿಯಾಯಿತಿ: 18 ದಿನಗಳಲ್ಲಿ 8.82 ಲಕ್ಷ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳ ಇತ್ಯರ್ಥ; 26.37 ಕೋಟಿ ರೂ ಸಂಗ್ರಹ

Hormuz ಉದ್ವಿಗ್ನತೆ ತೀವ್ರ: Chabahar port ಗುರಿಯಾಗಿಸಿ ಅಮೆರಿಕಾ ಭೀಕರ ದಾಳಿ, Iranಗೆ ಮತ್ತೊಂದು ಪ್ರಬಲ ಹೊಡೆತ..!

ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರ; ದೆಹಲಿ ಜಲಾವೃತ, ಜನಜೀವನ ಅಸ್ತವ್ಯಸ್ತ, Red ಅಲರ್ಟ್ ಘೋಷಣೆ..!