ರಾಜಸ್ತಾನ ಸಿಎಂ ವಸುಂದರಾ ರಾಜೇ ಜತೆ ಸಂಸದ ಸೋನಾರಾಂ 
ದೇಶ

ಮದುವೆ ಕಾರ್ಯಕ್ರಮ ವೇಳೆ ಯುವಕನಿಂದ ಬಿಜೆಪಿ ಸಂಸದನಿಗೆ ಕಪಾಳಮೋಕ್ಷ

ಮದುವೆ ಕಾರ್ಯಕ್ರಮದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರ್ ಬಿಜೆಪಿ ಸಂಸದ ಸೋನಾರಾಂ ಚೌಧರಿ ಅವರಿಗೆ ಯುವಕನೊಬ್ಬ...

ಬರ್ಮೆರ: ಮದುವೆ ಕಾರ್ಯಕ್ರಮದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರ್ ಬಿಜೆಪಿ ಸಂಸದ ಸೋನಾರಾಂ ಚೌಧರಿ ಅವರಿಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

ಸೋಮವಾರ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಸೋನಾರಾಂ ಹಾಗೂ ಸಂತ್ರಸ್ತ ಯುವಕ ಕಾರ್ತರಾಂ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರಾ ಜಿಲ್ಲಾಧಿಕಾರಿ ಹಾಗೂ ಇನ್ನಿತರರ ಎದುರೆ ಯುವಕನು ಸಂಸದ ಸೋನಾರಾಂ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಎಸ್ ಪಿ ಪಾರಿಸ್ ದೇಶ್ ಮುಖ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಕಾರ್ತರಾಂ ಹಾಗೂ ಆತನನೊಂದಿಗಿದ್ದ ಪ್ರೇಮರಾಂ ಬಡುನನ್ನು ವಶಕ್ಕೆ ಪಡೆದು ವಿಚಾರಣೆ ನಂತರ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸುಧೀರ್ ಶರ್ಮಾ ಅವರು ಘಟನೆ ನಡೆದ ಸ್ಥಳಕ್ಕಿಂತ ನಾನು ದೂರದಲ್ಲಿದ್ದೆ. ಗದ್ದಲದ ನಂತರ ಸಂಸದರು ಯುವಕನನ್ನು ತಳ್ಳುತ್ತಿರುವುದನ್ನು ನೋಡಿದೆ ಎಂದಷ್ಟೇ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!