ಮುಂಬಯಿ: ಮುಂಬಯಿನಲ್ಲಿ ಮಹಿಳಾ ಕ್ರಿಮಿನಲ್‌ಗಳ ಸಂಖ್ಯೆಯು ಪುರುಷರಿಗಿಂತ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ.
ಮಹಿಳೆಯರು ಸೇರಿದಂತೆ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಬಳಿಕ ಆಂಧ್ರಪ್ರದೇಶ, ಮಧ್ಯಪ್ರದೇಶಗಳಿವೆ.
ಕಳೆದ ಮೂರು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಬಂಧಿತ ಕ್ರಿಮಿನಲ್‌ಗಳ ಸಂಖ್ಯೆ 95,174, ಆಂಧ್ರ, ಮಧ್ಯಪ್ರದೇಶಗಳಲ್ಲಿ ಕ್ರಮವಾಗಿ 64,916 , 56,492 ಎಂದು ರಾಷ್ಟ್ರೀಯ ಅಪರಾಧ ರೆಕಾರ್ಡ್ ಬ್ಯೂರೊ ಹೇಳಿದೆ.
ಮುಂಬಯಿನಲ್ಲಿ 2013ರಲ್ಲಿ ಬಂಧಿತ ಮಹಿಳಾ ಕ್ರಿಮಿನಲ್‌ಗಳ ಸಂಖ್ಯೆ 3,115 ಇತ್ತು, 2014ರ ವೇಳೆಗೆ ಇದು 3,834ಕ್ಕೆ ತಲುಪಿದೆ. 2012-14ರವರೆಗೆ ಬಂಧಿತ ಪುರುಷ ಕ್ರಿಮಿನಲ್‌ಗಳ ಸಂಖ್ಯೆ 1,02,080 , ಮಹಿಳಾ ಕ್ರಿಮಿನಲ್‌ಗಳ ಸಂಖ್ಯೆ 9,487.
ಹೆಚ್ಚಿನ ಪುರುಷರು ಮತ್ತು ಮಹಿಳೆಯರು ಕಳ್ಳತನ, ದರೋಡೆ, ಹಲ್ಲೆ, ವಂಚನೆ, ಅಪಹರಣ ಪ್ರಕರಣಗಳ ಅಪರಾಧಿಗಳು ಎಂದು ಬ್ಯೂರೊ ಅಂಕಿ-ಅಂಶದಲ್ಲಿ ತಿಳಿಸಿದೆ.