ಶಂಕರಾಚಾರ್ಯ 
ದೇಶ

ಇಂದಿರಾ ಗಾಂಧಿ ಪಾರ್ಸಿಯನ್ನು ಮದುವೆಯಾಗಿದ್ದರೂ ಮತಾಂತರಗೊಂಡಿಲ್ಲ: ಶಂಕರಾಚಾರ್ಯ

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಪಾರ್ಸಿ ಜನಾಂಗದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರೂ ಮತಾಂತರಗೊಂಡಿರಲಿಲ್ಲ ಎಂದು...

ಹರಿದ್ವಾರ: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಪಾರ್ಸಿ ಜನಾಂಗದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರೂ ಮತಾಂತರಗೊಂಡಿರಲಿಲ್ಲ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದಿರಾ ಗಾಂಧಿ ಅವರು ಎಂದಿಗೂ ವಿದೇಶಿ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ. ಬದಲಾಗಿ ಭಾರತೀಯ ದೇವರನ್ನು ಆರಾಧಿಸುತ್ತಿದ್ದರು. ಅಷ್ಟೇ ಏಕೆ ಭಾರತಕ್ಕಾಗಿ ಇಂದಿರಾ ಕುಟುಂಬ ಹಲವು ತ್ಯಾಗ ಮಾಡಿದೆ ಎಂದು 94 ವರ್ಷದ ಸ್ವಾಮೀಜಿ ಮಾಜಿ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ.
ಈ ಹಿಂದೆ ಮಹಾರಾಷ್ಟ್ರದಲ್ಲಿನ ಬರದ ಕುರಿತು ಪ್ರತಿಕ್ರಿಯಿಸಿ, ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದಕ್ಕೆ ರಾಜ್ಯದಲ್ಲಿ ಬರ ಬಂತು ಎಂದು ಹೇಳಿದ್ದರು. ಅಲ್ಲದೆ ಮಹಿಳೆಯರು ಶನಿಶಿಂಗ್ಣಾಪುರ ದೇಗುಲ ಪ್ರವೇಶಿಸಿ ಅಲ್ಲಿಯ ಶನಿಯ ಶಿಲೆಯನ್ನು ಸ್ಪರ್ಷ ಮಾಡಿದ್ದರಿಂದ ಅತ್ಯಾಚಾರ ಪ್ರಕರಣ ಅಧಿಕವಾಗಲಿದೆ ಎಂದು ಭವಿಷ್ಯ ನುಡಿದಿದ್ದರು, ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?