ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬ್ಯಾಂಕ್ ಗಳಿಗೆ ಸಾಲ ಹಿಂತಿರುಗಿಸುವ ಪ್ರಸ್ತಾವನೆ: ಮೊತ್ತವನ್ನು 4 ರಿಂದ 6 ಸಾವಿರ ಕೋಟಿಗೆ ಏರಿಸಿದ ಮಲ್ಯ

ಉದ್ಯಮಿ ವಿಜಯ್ ಮಲ್ಯ, ಬ್ಯಾಂಕ್ ಗಳಿಗೆನ ಪಾವತಿ ಮಾಡಬೇಕಿರುವ ಒಟ್ಟು 9 ಸಾವಿರ ಕೋಟಿ ಪೈಕಿ 6 ಸಾವಿರ ಕೋಟಿ ಹಿಂತಿರುಗಿಸುವುದಾಗಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ವಿಜಯ್ ಮಲ್ಯ
Srinivas Rao BV
Updated On : 22 Apr 2016, 12:07 pm

ನವದೆಹಲಿ: ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಿಂದ ಕಂಗಾಲಾಗಿರುವ ಉದ್ಯಮಿ ವಿಜಯ್ ಮಲ್ಯ, ಬ್ಯಾಂಕ್ ಗಳಿಗೆನ ಪಾವತಿ ಮಾಡಬೇಕಿರುವ ಒಟ್ಟು 9 ಸಾವಿರ ಕೋಟಿ ಪೈಕಿ  6 ಸಾವಿರ ಕೋಟಿ ಹಿಂತಿರುಗಿಸುವುದಾಗಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ವಿಜಯ್ ಮಲ್ಯ 4 ಸಾವಿರ ರೂಗಳನ್ನು ಪಾವತಿ ಮಾಡಲು ಸಿದ್ಧ ಎಂಬ ಮಾಹಿತಿ ನೀಡಲಾಗಿತ್ತು. ಈಗ ಬಂಧನ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಬ್ಯಾಂಕ್ ಗಳಿಗೆ 6 ಸಾವಿರ ಕೋಟಿ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಗೆ ನೀಡಲಾಗಿರುವ ಮಾಹಿತಿಯಲ್ಲಿ ಭಾರತಕ್ಕೆ ಬರುವುದರ ಬಗ್ಗೆ ಮೌನ ವಹಿಸಿರುವ ವಿಜಯ್ ಮಲ್ಯ, 6 ಸಾವಿರ ಕೋಟಿ ತಾವು ಸದ್ಯದ ಸ್ಥಿತಿಯಲ್ಲಿ ಪಾವತಿಸಬಹುದಾದ ಮೊತ್ತ ಎಂದು ತಿಳಿಸಿದ್ದಾರೆ. ಇನ್ನು ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮ ನೆಲಕಚ್ಚುವುದಕ್ಕೆ ಅಧಿಕ ತೈಲ ಬೆಲೆ, ವಿಪರೀತವಾಗಿ ವಿಧಿಸಲಾಗುತ್ತಿದ್ದ ತೆರಿಗೆ, ದೋಷಯುಕ್ತ ವಿಮಾನ ಎಂಜಿನ್ ಗಳು ಕಾರಣವಾಯಿತು. ಇದರಿಂದಾಗಿ 6 ,107 ಕೋಟಿ ನಷ್ಟ ಉಂಟಾಯಿತು ಎಂದು ಹೇಳಿದ್ದಾರೆ.
ವಿಜಯ್ ಮಲ್ಯ 13  ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಲು 4 ಸಾವಿರ ಕೋಟಿ ರೂ ಪಾವತಿ ಮಾಡಲು ಸಿದ್ಧರಿದ್ದಾರೆ ಎಂದು ಮಾ.30 ರಂದು ಅವರ ಪರ ವಕೀಲರು ಸುಪ್ರೀಂ ಗೆ ಮಾಹಿತಿ ನೀಡಿದ್ದರು. ಬಹುರಾಷ್ಟ್ರೀಯ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ವಿರುದ್ಧ ವಿಜಯ್ ಮಲ್ಯ ದ್ಯಾವೆ ಹೂಡಿದ್ದು ಆ ಪ್ರಕರಣದಲ್ಲಿ ಜಯಗಳಿಸಿದರೆ ಅಲ್ಲಿಂದ ಸಿಗುವ ಸಾಧ್ಯತೆಯಿರುವ ೨೦೦೦ ಕೋಟಿ ರೂ ಮೊತ್ತವನ್ನು ಸೇರಿಸಿ 6 ಸಾವಿರ ಕೋಟಿ ರೂ  ಪಾವತಿಸಲಿದ್ದಾರೆ ಎಂದು ತಿಳಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments