ದೇಶ

ಸುಬ್ರಹ್ಮಣಿಯನ್ ಸ್ವಾಮಿ, ಮೇರಿ ಕೋಮ್, ಸ್ವಪನ್ ದಾಸ್ ಗುಪ್ತ ರಾಜ್ಯಸಭೆಗೆ?

Srinivas Rao BV

ನವದೆಹಲಿ: ಸೋಮವಾರದಿಂದ (ಏ.25 ರಿಂದ) ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು ರಾಜ್ಯಸಭೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಕೇಂದ್ರ ಸರ್ಕಾರ ಅಂತಿಮ ಹಂತದ ಸಿದ್ಧತೆ ನಡೆಸಿದೆ.
ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವವರ ಹೆಸರುಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಈಗಾಗಲೆ ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ನಾಮನಿರ್ದೇಶನ ಪಟ್ಟಿಯಲ್ಲಿ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ, ಮಾಜಿ ಸಂಸದ ನವಜೋತ್ ಸಿಂಗ್ ಸಿಧು, ಬಾಕ್ಸರ್ ಮೇರಿ ಕೋಮ್, ಮಲಯಾಳಂ ನಟ ಸುರೇಶ್ ಗೋಪಿ, ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ಆರ್ಥಿಕ ತಜ್ಞ ನರೇಂದ್ರ ಜಾದವ್ ಹಾಗೂ ಹಿರಿಯ ಅಂಕಣಕಾರ ಸ್ವಪನ್ ದಾಸ್ ಗುಪ್ತ ಅವರ ಹೆಸರುಗಳಿವೆ ಎಂದು ತಿಳಿದುಬಂದಿದೆ.
ರಾಜ್ಯಸಭೆಯ ಒಟ್ಟು 245 ಸದಸ್ಯರಲ್ಲಿ 12 ಸದಸ್ಯರನ್ನು ನಾಮ ನಿರ್ದೇಶನದ ಮೂಲಕ ಆಯ್ಕೆ ಮಾಡಲು ಅವಕಾಶವಿದೆ. ರಾಜ್ಯಸಭೆಗೆ ಎನ್ ಡಿಎ ಸರ್ಕಾರ ಸದಸ್ಯರನ್ನು ನಾಮ ನಿರ್ದೇಶನಗೊಳಿಸುವುದರಿಂದ, ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷವನ್ನು ಪ್ರರಿನಿಧಿಸುವ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದು ಮಸೂದೆಗಳ ಅಂಗೀಕಾರದ ವೇಳೆ ಸರ್ಕಾರಕ್ಕೆ ನೆರವಾಗಲಿದೆ.

SCROLL FOR NEXT