ವಿಜಯಂತಿ, ಜೈ ಗೋಬಿಂದ್ ಸಿಂಗ್ ಹಾಗೂ ಅವರ ಪುತ್ರಿ
ಸಸರಾಂ, ಬಿಹಾರ: ನಿತಿಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರ ಬಿಹಾರದಲ್ಲಿ ಮದ್ಯೆ ನಿಷೇಧಿದ ಪರಿಣಾಮವಾಗಿ ದಂಪತಿಗಳಿಬ್ಬರು 13 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ.
ಬಿಹಾರದ ಸಸರಾಂ ಜಿಲ್ಲೆಯ ಮೊಹುದ್ದಿಗಂಜ್ ನಿವಾಸಿಗಳಾದ ಜೈ ಗೋಬಿಂದ್ ಸಿಂಗ್ ಹಾಗೂ ಅವರ ಪತ್ನಿ ವಿಜಯಂತಿ ದೇವಿ ಅವರು ಹಲವು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಎರಡು ದಶಕಗಳ ಹಿಂದೆ ಈ ಇಬ್ಬರು ದಂಪತಿಗಳು ಮದುವೆಯಾಗಿದ್ದರು, ಆದರೆ 2003ರಲ್ಲಿ ಪತ್ನಿ ವಿಜಯಂತಿ ಅವರು ಕುಡಿದು ಬಂದು ನಿತ್ಯ ಕಿರುಕುಳ ನೀಡುತ್ತಿದ್ದ ಪತಿ ಜೈ ಗೋಬಿಂದ್ ಸಿಂಗ್ ಅವರಿಂದ ದೂರವಾಗಿದ್ದರು, ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ವಿಜಯಂತಿ ಪತಿಯನ್ನು ತೊರೆದು ಮನೆಯಿಂದ ಹೊರ ಬಂದಿದ್ದರು.
'ನನ್ನ ಪತಿ ನಿತ್ಯ ಕುಡಿದು ಬರುತ್ತಿದ್ದರು. ಕೆಲವು ಬಾರಿ ನನ್ನ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ಬೇಸತ್ತು ನಾನು ಒಂದು ದಿನ ಮನೆ ಬಿಟ್ಟು ಹೋದೆ' ಎಂದು ವಿಜಯಂತಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
'ನಾನು ಹಲವು ಬಾರಿ ಮದ್ಯ ಸೇವನೆಯನ್ನು ಬಿಡಲು ಪ್ರಯತ್ನಿಸಿದ್ದೆ. ಆದರೆ ಸಂಪೂರ್ಣ ಬಿಡಲು ಸಾಧ್ಯವಾಗಿರಲಿಲ್ಲ. ಈಗ ನಿತಿಶ್ ಕುಮಾರ್ ಸರ್ಕಾರ ಮದ್ಯ ನಿಷೇಧ ಮಾಡಿ ತುಂಬಾ ಒಳ್ಳ ಕೆಲಸ ಮಾಡಿದ್ದಾರೆ. ಇದರಿಂದಾಗ ನಾನು ನನ್ನ ಪತ್ನಿ ಮತ್ತೆ ಒಂದಾಗುವಂತಾಯಿತು' ಎಂದು ಜೈ ಗೋಬಿಂದ್ ಸಿಂಗ್ ಅವರು ಹೇಳಿದ್ದಾರೆ.
ಹಲವು ವರ್ಷಗಳ ನಂತರ ಮತ್ತೆ ಒಂದಾದ ದಂಪತಿಗಳಿಗೆ ಅವರ ಮಗಳೇ ಮುಂದೆ ನಿಂತು ಎರಡನೇ ಬಾರಿ ಮದುವೆ ಮಾಡಿ ಸಂಭ್ರಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics