ಉತ್ತರಾಖಂಡ್ ಹೈಕೋರ್ಟ್, ಹರೀಶ್ ರಾವತ್
ಡೆಹ್ರಾಡೂನ್: ಉತ್ತರಾಖಂಡ್ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಒಂಬತ್ತು ಬಂಡಾಯ ಕಾಂಗ್ರೆಸ್ ಶಾಸಕರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಬಿಹಾರ ವಿಧಾನಸಭೆ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರು ಶನಿವಾರ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
9 ಬಂಡಾಯ ಶಾಸಕರು ಸಂವಿಧಾನದ 10ನೇ ವಿಧಿಯನ್ನು ಉಲ್ಲಂಘಿಸಿ ಅವರು ಬಿಜೆಪಿಗೆ ಹೋಗಿದ್ದಾರೆ ಎಂದು ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್ ಅವರು ಹೇಳಿದ್ದಾರೆ.
'ಒಂದು ವೇಳೆ ಅವರು 10ನೇ ವಿಧಿಯನ್ನು ಉಲ್ಲಂಘಿಸಿದ್ದೇಯಾದರೆ, ಅವರು ಅನರ್ಹತೆಗೆ ತಡೆ ತರಲು ಹೇಗೆ ಸಾಧ್ಯ' ಎಂದು ಹಿರಿಯ ವಕೀಲ ಪ್ರಶ್ನಿಸಿದ್ದಾರೆ.
'ಅವರು ಬಿಜೆಪಿ ಸೇರುವ ಸಂದರ್ಭದಲ್ಲಿ ನಿವೇದನಾ(ಮತ ವಿಭಜನೆ ಮಾಡಲು) ಪತ್ರಕ್ಕೆ ಸಹಿ ಹಾಕಿದ್ದಾರೆ. ಇದು ಕಾನೂನು ಬಾಹಿರ ಮತ್ತು ಅಸಂವಿಧಾನಿಕ' ಕಪಿಲ್ ಸಿಬಲ್ ಅವರು ವಾದಿಸಿದ್ದಾರೆ.