ದೇಶ

ಹರಿದ್ವಾರ: ರಾಮ್ ದೇವ್ ಫುಡ್ ಪಾರ್ಕ್ ಗೆ ಸಿಐಎಸ್ಎಫ್ 24x7 ಕಾವಲು

Vishwanath S

ನವದೆಹಲಿ: ಹರಿದ್ವಾರದಲ್ಲಿರುವ ಯೋಗಗುರು ಬಾಬಾ ರಾಂ ದೇವ್ ಅವರ ಪುಡ್ ಪಾರ್ಕ್ ಗೆ 24X7 ಗಂಟೆ ಅರೆಸೇನಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.

ಫುಡ್ ಪಾರ್ಕ್ ಗೆ 34 ಕಮಾಂಡೋಗಳು ಹಾಗೂ ಓರ್ವ ಅಸಿಸ್ಟೆಂಟ್ ಕಮಾಂಡಿಂಗ್ ಸೇರಿದಂತೆ 36 ಮಂದಿ ದಿನದ 24 ಗಂಟೆ ರಕ್ಷಣೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಐಟಿ ಕಂಪನಿ ಇನ್ಫೋಸಿಸ್ ಗೆ ಮಾತ್ರ ಈ ರೀತಿಯ ಭದ್ರತೆಯನ್ನು ಒದಗಿಸಿತ್ತು. ಈಗ ಬಾಬಾ ರಾಮ್ ದೇವ್ ಅವರ ಆಹಾರ ತಯಾರಿಕಾ ಘಟಕಕ್ಕೂ ಭದ್ರತೆ ಒದಗಿಸಿರುವುದು ಅಚ್ಚರಿ ಸಂಗತಿಯಾಗಿದೆ.

ರಾಮ್ ದೇವ್ ಅವರು ಹರಿದ್ವಾರದಲ್ಲಿರುವ ಪತಂಜಲಿ ಆಹಾರ ಮತ್ತು ಹರ್ಬಲ್ ಪಾರ್ಕ್ ಗೆ ಇದುವರೆಗೂ ಖಾಸಗಿಯಾಗಿ ಭದ್ರತೆಯನ್ನು ನಿಯೋಜಿಸಿಕೊಂಡಿದ್ದರು.

SCROLL FOR NEXT