ಮಾಲೆಗಾಂವ್ ಸ್ಫೋಟ 
ದೇಶ

ಮಾಲೆಗಾಂವ್ ಸ್ಫೋಟ ಪ್ರಕರಣ: ಎಲ್ಲಾ 9 ಆರೋಪಿಗಳು ದೋಷಮುಕ್ತ

2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರೆತೆಯುಂಟಾದ ಕಾರಣ ಎಲ್ಲಾ 9 ಮುಸ್ಲಿಂ ಆರೋಪಿಗಳನ್ನು ಮುಂಬೈ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿ...

ಮುಂಬೈ: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರೆತೆಯುಂಟಾದ ಕಾರಣ ಎಲ್ಲಾ 9 ಮುಸ್ಲಿಂ ಆರೋಪಿಗಳನ್ನು ಮುಂಬೈ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿ, ಬಿಡುಗಡೆಗೆ ಆದೇಶ ನೀಡಿದೆ.

2006ರಲ್ಲಿ ಮಾಲೆಗಾಂವ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 37 ಮಂದಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದೀಗ ಪ್ರಕರಣವನ್ನು ಕೈಬಿಟ್ಟಿದ್ದು, ಯುವಕರನ್ನು ದೋಷಾರೋಪದಿಂದ ಮುಕ್ತಗೊಳಿಸಿ ಜಸ್ಟೀಸ್ ವಿವಿ ಪಾಟೀಲ್ ತೀರ್ಪು ನೀಡಿದರು.

ಈ ಪ್ರಕರಣದ ಬಗ್ಗೆ ಮೊದಲು ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸಿ ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ನೂರುಲ್ ಹುದಾ, ಶಬ್ಬೀರ್ ಅಹ್ಮದ್, ರಾಯೀಸ್ ಅಹ್ಮದ್, ಸಲ್ಮಾನ್ ಫಾರ್ಸಿ, ಫೋರೋಘ್ ಮಗ್ದುಮಿ, ಶೇಖ್ ಮೊಹಮ್ಮದ್ ಅಲಿ, ಆಸಿಫ್ ಖಾನ್, ಮೊಹಮ್ಮದ್ ಝಹೀದ್ ಹಾಗೂ ಅಬ್ರಾರ್ ಅಹ್ಮದ್ ಎಂಬುವವರನ್ನು ಬಂಧಿತ್ತು. ಅಲ್ಲದೆ, ಈ ಸಂಘಟನೆ ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ನೆರವಿನ ಮೂಲಕ ಸ್ಫೋಟ ಕೃತ್ಯಗಳನ್ನು ಎಸಗಿತ್ತು ಎಂದು ತನಿಖಾ ದಳ ಹೇಳಿತ್ತು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಮತ್ತು ಎಟಿಎಸ್ ಜಂಟಿಯಾಗಿ ತನಿಖೆ ನಡೆಸಿದ್ದವು.

ನಂತರ ಇವರಲ್ಲಿ 6 ಮಂದಿ 2011ರ ನವೆಂಬರ್ ತಿಂಗಳಿನಲ್ಲಿ ಜಾಮೀನು ಪಡೆದುಕೊಂಡಿದ್ದರು. ಒಬ್ಬ ಆರೋಪಿ ಸಾವನ್ನಪ್ಪಿದ್ದ, ಇಬ್ಬರು ಆರೋಪಿಗಳು ದೋಷಿಯಾಗಿದ್ದರು.

ಪ್ರಕರಣ ಸಂಬಂಧ ಕಳೆದ ವಾರವಷ್ಟೇ ರಾಷ್ಟ್ರೀಯ ತನಿಖಾ ದಳ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಈ 9 ಮಂದಿ ಮುಸ್ಲಿಂ ಯುವಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಳಿಲ್ಲ ಎಂದು ಮುಂಬೈ ಕೋರ್ಟ್ ಗೆ ತಿಳಿಸಿತ್ತು. ಇದರಿಂದಾಗಿ ಎಲ್ಲಾ ಆರೋಪಿಗಳು ದೋಷಮುಕ್ತರಾಗಲು ಹಾದಿ ಸುಲಭ ದಾರಿ ಸಿಕ್ಕಂತಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT