ದೇಶ

ಪಾಕ್ ಕುತಂತ್ರದಿಂದ ದಾವೂದ್ ಬಂಧನ ಭಾರತಕ್ಕೆ ಮರೀಚಿಕೆ?

Srinivasamurthy VN

ಇಸ್ಲಾಮಾಬಾದ್: ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಂಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ನನ್ನು ಬಂಧಿಸಲು ಭಾರತದ ಗುಪ್ತಚರ ಅಧಿಕಾರಿಗಳು ಹರಸಾಹಸ ಪಡುತ್ತಿದ್ದರೆ, ಅತ್ತ  ಪಾಕಿಸ್ತಾನ ಮಾತ್ರ ಅತನ ರಕ್ಷಣೆಗೆ ಕಂಕಣ ಕಟ್ಟಿ ಬೆನ್ನಿಗೆ ನಿಂತಿದೆ.

ದಾವೂದ್ ಇಬ್ರಾಹಿಂ ರಕ್ಷಣೆಗಾಗಿ ಪಾಕಿಸ್ತಾನ ಸರ್ಕಾರ ಮತ್ತು ಐಎಸ್ ಐ ಸತತ ಶ್ರಮ ಪಡುತ್ತಿದ್ದು, ಕೇಂದ್ರ ಗುಪ್ತಚರ ಮೂಲಗಳ ಪ್ರಕಾರ ಒಂದು ವೇಳೆ ದಾವೂದ್ ಪಾಕಿಸ್ತಾನದಲ್ಲೇ ಸತ್ತರೂ  ಆತನ ಸಾವಿನ ಸುದ್ದಿ ಬಹಿರಂಗವಾಗದಂತೆ ಪಾಕಿಸ್ತಾನ ಸರ್ಕಾರ ಎಚ್ಚರಿಕೆ ವಹಿಸಿದಿ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ಸರ್ಕಾರ ದಾವೂದ್ ಕರಾಚಿಯಲ್ಲಿ ಇರುವುದನ್ನೇ ಮುಚ್ಚಿಹಾಕುವ ಸಾಧ್ಯತೆಗಳಿದ್ದು, ಆತ ಸತ್ತರೂ ಹೊರಜಗತ್ತಿಗೆ ಬಹಿರಂಗವಾಗುವುದೂ ಅನುಮಾನವಾಗಿದೆ ಎಂದು ಹೇಳಲಾಗುತ್ತಿದೆ.  ಇದೇ ಸನ್ನಿವೇಶದಲ್ಲಿ ಪಾಕಿಸ್ತಾನದಿಂದ ಆತನನ್ನು ಬೇರೆ ದೇಶಕ್ಕೆ ರವಾನಿಸಿದರೆ ಬಂಧಿಸುವ ಅವಕಾಶಕ್ಕಾಗಿ ಭಾರತದ ಅಧಿಕಾರಿಗಳು ಕಾದು ಕುಳಿತಿದ್ದು, ಇದಕ್ಕೂ ಪಾಕಿಸ್ತಾನ  ಅಡ್ಡಗೋಡೆಯಾಗಿ ನಿಂತಿದೆ. ದಾವೂದ್ ಕರಾಚಿಯಲ್ಲೇ ಇದ್ದಾನೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಭಾರತ ನೀಡಿದ್ದರೂ ಪಾಕ್ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ದಾವೂದ್‌ಗೆ  ಕರಾಚಿಯಲ್ಲಿ ಚಿಕಿತ್ಸೆ ನೀಡುತ್ತಿರುವ ವರದಿಗಳು ಬಹಿರಂಗವಾಗಿರುವುದು ಭಾರತದ ದನಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಹೀಗಾಗಿ ಪಾಕಿಸ್ತಾನದ ಕುತಂತ್ರದಿಂದಾಗಿ ಒಂದು ವೇಳೆ ದಾವೂದ್ ಚಿಕಿತ್ಸೆ ವಿಫಲವಾಗಿ ಆತ ಕರಾಚಿಯಲ್ಲೇ ಸತ್ತಲ್ಲಿ ಈತನನ್ನು ಜೀವಂತವಾಗಿ ವಶಕ್ಕೆ ಪಡೆಯುವ ಭಾರತದ ಆಸೆ  ಕನಸಾಗಿಯೇ ಉಳಿಯಲಿದೆ. ಜತೆಗೆ 1993ರ ಮುಂಬೈ ಸರಣಿ ಸೋಟ ಪ್ರಕರಣದ ಸಂತ್ರಸ್ತರಿಗೂ ನ್ಯಾಯ ಮರೀಚಿಕೆಯಾಗಲಿದೆ.

SCROLL FOR NEXT