ನವದೆಹಲಿ: ರೈಲ್ವೆ ನೇಮಕಾತಿ ನಿಯಂತ್ರಣ ಮಂಡಳಿಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ನಿಗದಿಯಾಗಿದ್ದಂತೆ ನಾಳೆ(ಏಪ್ರಿಲ್ 27)ಯಿಂದ ಮೇ 3ರವರೆಗೆ ಪರೀಕ್ಷೆ ನಡೆಯಬೇಕಾಗಿತ್ತು. ಮುಂದಿನ ಪರೀಕ್ಷಾ ದಿನಾಂಕವನ್ನು ರೈಲ್ವೆ ಮಂಡಳಿ ಇನ್ನೂ ನಿಗದಿಪಡಿಸಿಲ್ಲ.
ರೈಲ್ವೆ ಇಲಾಖೆಯ ತಾಂತ್ರಿಕೇತರ ಸಿಬ್ಬಂದಿ ವರ್ಗಕ್ಕೆ ದೇಶಾದ್ಯಂತ ಒಂದು ಕೋಟಿಗೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳುವುದರಲ್ಲಿದ್ದರು.18,252 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ.ಪರೀಕ್ಷೆಯ ಮುಂದಿನ ದಿನಾಂಕವನ್ನು ಅಭ್ಯರ್ಥಿಗಳಿಗೆ ಮೊಬೈಲ್ ಸಂದೇಶ ಮೂಲಕ ಕಳುಹಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ.