ದೇಶ

ಭಾರತದ ಬಿ ಸ್ಕೂಲ್ ಗಳಿಂದ ಶೇ. 7ರಷ್ಟು ಪದವೀಧರರಿಗೆ ಮಾತ್ರ ಉದ್ಯೋಗ: ಅಸ್ಸೊಚಾಮ್

Shilpa D

ನವದೆಹಲಿ: ಭಾರತದಲ್ಲಿರುವ ಬಿಸಿನೆಸ್ ಸ್ಕೂಲ್​ಗಳು ಕಳಪೆ ಗುಣಮಟ್ಟ ಹೊಂದಿವೆ. ದೇಶದಲ್ಲಿ ಇರುವ ಸುಮಾರು 5,500 ಬಿ ಸ್ಕೂಲ್​ಗಳ ಶಿಕ್ಷಣ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ಅಸ್ಸೋಚಾಮ್ (ವಾಣಿಜ್ಯ ಸಂಸ್ಥೆ) ವರದಿ ಮಾಡಿದೆ.

ದೇಶದ ಬಿ- ಸ್ಕೂಲ್ ನಲ್ಲಿ  ಅಧ್ಯಯನ ಮಾಡಿದ ಶೇಕಡಾ 7ರಷ್ಟು ಪದವೀಧರ ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದೆ. ಈ ಸ್ಕೂಲ್ ಗಳಲ್ಲಿ ಕೆಳಮಟ್ಟದ ಮೂಲಭೂತ ಸೌಕರ್ಯ, ಉತ್ತಮ ಶ್ರೇಣಿಯ ಉದ್ಯೋಗದ ಕೊರತೆ, ಸುಸಜ್ಜಿತವಲ್ಲದ ಕ್ಯಾಂಪಸ್, ಶಿಕ್ಷಕರ ಕೊರತೆ ಇರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಭಾರತದಲ್ಲಿನ ಅಧಿಕ ಶಾಲೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲ ಶೇ 7ರಷ್ಟು ಎಂಬಿಎ ಪದವೀಧರರು ಮಾತ್ರ ಉದ್ಯೋಗ ಗಿಟ್ಟಿಸಿಕೊಳ್ಳಲು ಸಫಲರಾಗಿದ್ದಾರೆ. ಇನ್ನುಳಿದಂತೆ ಶೇ 93ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಲಖನೌ ಸೇರಿದಂತೆ ಪ್ರಮುಖ ನಗರದಲ್ಲಿರುವ 240 ಬಿ ಸ್ಕೂಲ್​ಗಳು ಈಗಾಗಲೇ ಬಾಗಿಲು ಮುಚ್ಚಿವೆ. ಇನ್ನು 120 ಸ್ಕೂಲ್​ಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಕಳೆದ 15 ವರ್ಷಕ್ಕೆ ಹೋಲಿಸಿದರೆ ಐಐಟಿ, ಐಐಎಮ್ ಶಿಕ್ಷಣ ಗುಣಮಟ್ಟದಲ್ಲಿ ಕೂಡ ಗಮನಾರ್ಹ ಕುಸಿತವಾಗಿದೆ.

SCROLL FOR NEXT