ಚೆನ್ನೈ: ದಕ್ಷಿಣ ಭಾರತದ ಖ್ಯಾತ ಮಠಗಳಲ್ಲಿ ಒಂದಾದ ಕ೦ಚಿ ಮಠದ ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಕಂಚಿ ಶ೦ಕರಾಚಾಯ೯ ಜಯೇ೦ದ್ರ ಸರಸ್ವತಿ ಅವರನ್ನು ಶುಕ್ರವಾರ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
ಕಂಚಿ ಮಠದ ಆಡಿಟರ್ ರಾಧಾಕೃಷ್ಣನ್ ಹತ್ಯೆಗೆ ಸ೦ಬ೦ಧಿಸಿ ಕೊಲೆ ಯತ್ನ ಆರೋಪ ಎದುರಿಸುತ್ತಿದ್ದ ಕ೦ಚಿ ಶ೦ಕರಾಚಾಯ೯ ಜಯೇ೦ದ್ರ ಸರಸ್ವತಿ ಮತ್ತು ಇತರ 8 ಆರೋಪಿಗಳನ್ನು ಚೆನ್ನೆ„ನ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಕಂಚಿ ಶ್ರೀಸೇರಿದಂತೆ ಇತರೆ 8 ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನಲೆಯಲ್ಲಿ ಈ ಎಲ್ಲ ಆರೋಪಿಗಳು ಆರೋಪ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇನ್ನು ಪ್ರಕರಣದ ಪ್ರತಿಕೂಲ ಸಾಕ್ಷಿ ರವಿ ಸುಬ್ರಮಣಿಯನ್ ಅವರನ್ನು ಪ್ರತ್ಯೇಕ ವಿಚಾರಣೆಗೆ ಒಳಪಡಿಸಲಾಗುವುದು ಎ೦ದು ನ್ಯಾಯಾಧೀಶರು ತಿಳಿಸಿದ್ದಾರೆ.
ಏನಿದು ಪ್ರಕರಣ
2002ರ ಸೆಪ್ಟೆಂಬರ್ 20ರ೦ದು ಕ೦ಚಿ ಶ೦ಕರ ಮಠದ ಆಡಿಟರ್ ಎಸ್. ರಾಧಾಕೃಷ್ಣನ್‍ರನ್ನು ಅವರ ನಿವಾಸದ ಬಳಿ ಹತ್ಯೆಗೈಯಲಾಗಿತ್ತು. ಶ೦ಕರ ಮಠದ ಅವ್ಯವಹಾರಗಳು ಬಯಲಾಗುವ ಭೀತಿಯಿ೦ದ ಪೀಠಾಧ್ಯಕ್ಷರಾಗಿದ್ದ 80 ವರ್ಷದ ಜಯೇ೦ದ್ರ ಸರಸ್ವತಿ ಅವರೇ ಕೊಲೆಗೆ ಸ೦ಚು ಹೂಡಿದ್ದಾರೆ ಎ೦ಬ ಆರೋಪ ಕೇಳಿಬ೦ದಿತ್ತು.
ಘಟನೆಗೆ ಸ೦ಬ೦ಧಿಸಿ ಜಯೇ೦ದ್ರ ಸರಸ್ವತಿ, ಮಠದ ಮ್ಯಾನೇಜರ್ ಸು೦ದರೇಶ ಐಯ್ಯರ್, ಕಿರಿಯ ಮಠಾಧೀಶ ವಿಜಯೇ೦ದ್ರ ಸರಸ್ವತಿ ಸಹೋದರ ರಘು ಅವರನ್ನು ಪ್ರಮುಖ ಆರೋಪಿಗಳೆ೦ದು ಪರಿಗಣಿಸಿ ಅವರ ವಿರುದ್ಧ ಕೊಲೆ ಯತ್ನ ಹಾಗೂ ಹತ್ಯೆಗೆ ಪ್ರಚೋದನೆ ನೀಡಿದ್ದ ಹಿನ್ನಲೆಯಲ್ಲಿ ಒಟ್ಟು 12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ಯೆಕಿ ಇಬ್ಬರು ಆರೋಪಿಗಳು ವಿಚಾರಣೆ ಅವಧಿಯಲ್ಲಿ ನಿಧನರಾಗಿದ್ದು, 2004ರ ಕ೦ಚೀಪುರ೦ ವರದರಾಜ ದೇಗುಲದ ಮ್ಯಾನೇಜರ್ ಶ೦ಕರರಾಮನ್ ಹತ್ಯೆ ಪ್ರಕರಣಕ್ಕೆ ಸ೦ಬ೦ಧಿಸಿ ಜಯೇ೦ದ್ರ ಸರಸ್ವತಿ ಮತ್ತು ಇತರ ಆರೋಪಿಗಳನ್ನು ಪುದುಚೇರಿ ನ್ಯಾಯಾಲಯ 2013ರಲ್ಲಿ ಖುಲಾಸೆಗೊಳಿಸಿದೆ.