ದೇಶ

ಅಧಿಕ ಉಷ್ಣಾಂಶ; ಹಗಲಿನಲ್ಲಿ ಅಡುಗೆ ತಯಾರಿಗೆ ಬಿಹಾರ ಅಧಿಕಾರಿಗಳ ನಿಷೇಧ

Mainashree
ಪಾಟ್ನಾ: ದೇಶಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬಿಸಿಗಾಳಿಯಿಂದಾಗಿ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಗೆ ತುತ್ತಾದವರ ಸಂಖ್ಯೆ ಹೆಚ್ಚಿದೆ. 
ಈ ಹಿನ್ನಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಗಲು ಹೊತ್ತಿನಲ್ಲಿ ಅಡುಗೆ, ಪೂಜೆ ಹಾಗೂ ಹೋಮ, ಹವನಗಳನ್ನು ಬಿಹಾರದ ಅಧಿಕಾರಿಗಳು ನಿಷೇಧಿಸಿದ್ದಾರೆ.
ಉಷ್ಣತೆ ಹೆಚ್ಚಿರುವ ವೇಳೆಯಲ್ಲಿ ಅಡುಗೆ ಮಾಡುತ್ತಿರಬೇಕಾದರೆ, ಆಕಸ್ಮಿಕ ಬೆಂಕಿ ತಗುಲಿ ಅದರಲ್ಲಿ ಮೃತಪಟ್ಟವರ ಸಂಖ್ಯೆ 80. ಬೇಸಿಗೆಯ ಉಷ್ಣತೆಯಿಂದಾಗಿ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 
ಈ ಹಿನ್ನಲೆಯಲ್ಲಿ ಬೆಳಿಗ್ಗೆ 9 ಗಂಟೆಯೊಳೆಗೆ ಹಾಗೂ ಸಂಜೆ 6 ಗಂಟೆ ಮೇಲೆ ಬಿಹಾರದ ಜನತೆ ಅಡುಗೆ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇತ್ತೀಚೆಗಷ್ಟೇ ಬಿಹಾರದಲ್ಲಿ ಸುಮಾರು 2500 ಗುಡಿಸಲುಗಳಿಗೆ ಬೆಂಕಿ ಬಿದ್ದು 36 ಜನರು ಮೃತಪಟ್ಟ ಹಿನ್ನೆಲೆಯಲ್ಲಿ ಬಿಹಾರದ ಸರ್ಕಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಅಡುಗೆ, ಪೂಜೆ ಹಾಗೂ ಹೋಮ ಹವನಗಳನ್ನು ಮಾಡದಂತೆ ಆದೇಶ ಹೊರಡಿಸಿತ್ತು. ಇಂದಿನಿಂದ ಆ ಆದೇಶ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT