ದಲೈ ಲಾಮ 
ದೇಶ

ಟಿಬೇಟ್ ವಿವಾದ: ಚೀನಾದೊಂದಿಗೆ ಶಾಂತಿಯುತ ಮಾತುಕತೆಗೆ ದಲೈಲಾಮ ಯತ್ನ?

ಗಡಿಪಾರಾಗಿರುವ ಟಿಬೆಟ್ ನ ಸರ್ಕಾರ ಚೀನಾದೊಂದಿಗೆ ಸ್ನೇಹಶೀಲ ಮಾತುಕತೆಗೆ ಮುಂದಾಗಿದೆಯೇ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಟಿಬೇಟ್ ನ ಧರ್ಮಗುರು ದಲೈ ಲಾಮ ನಡೆಸಿರುವ...

ನವದೆಹಲಿ: ಗಡಿಪಾರಾಗಿರುವ ಟಿಬೆಟ್ ನ ಸರ್ಕಾರ ಚೀನಾದೊಂದಿಗೆ ಸ್ನೇಹಶೀಲ ಮಾತುಕತೆಗೆ ಮುಂದಾಗಿದೆಯೇ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಟಿಬೇಟ್ ನ ಧರ್ಮಗುರು ದಲೈ ಲಾಮ ನಡೆಸಿರುವ ಸಂಭಾಷಣೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಡೇ ಸ್ಟಾಂಡರ್ಡ್ ಪರಿಶೀಲಿಸಿರುವ ದಲೈ ಲಾಮ ಅವರ ಸಂಭಾಷಣೆ ಪ್ರಕಾರ, ದಲೈ ಲಾಮ ಅವರ ಬೆಂಬಲಿಗರು ಚೀನಾದೊಂದಿಗೆ ಸ್ನೇಹಶೀಲ ಮಾತುಕತೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಟಿಬೇಟ್ ನ್ನು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಗಡಿಪಾರಾಗಿರುವ ಟಿಬೇಟ್ ನವರು ಚೀನಾದಿಂದ ಸ್ವಾತಂತ್ರ್ಯ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಸಾರ್ವಜನಿಕ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಟಿಬೇಟ್ ನ ದಲೈ ಲಾಮ ಚೀನಾದೊಂದಿಗೆ ಮಾತುಕತೆ ನಡೆಸಲು ಯತ್ನಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

ದಲೈ ಲಾಮ ಅವರ ಬೆಂಬಲಿಗರ ಈ ನಿರ್ಧಾರ ಟಿಬೇಟ್ ಗೆ ಸಂಬಂಧಿಸಿದಂತೆ  ಭಾರತದ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಲಡಾಕ್ ನಲ್ಲಿರುವ ಬೌದ್ಧರ ಧಾರ್ಮಿಕ ಕೇಂದ್ರಗಳ ಮೇಲಿನ ಒಡೆತನಕ್ಕಾಗಿ ಈಗಾಗಲೇ ಎರಡು ಪಂಗಡಗಳ ಪೈಪೋಟಿ ನಡೆಯುತ್ತಿದೆ ಇದೇ ವೇಳೆ ದಲೈ ಲಾಮ ಟಿಬೇಟ್ ನ ವಿಷಯದಲ್ಲಿ ಚೀನಾದೊಂದಿಗೆ ಸೌಹಾರ್ದಯುತವಾದ ಮಾತುಕತೆ ನಡೆಸಲಿರುವುದು ಭಾರತದ ಪಾಲಿಗೆ ಆತಂಕದ ವಿಷಯವಾಗಲಿದೆ.

ಟಿಬೇಟ್ ನ ಗಡಿಪಾರಾಗಿರುವ ಸರ್ಕಾರದ ಸದಸ್ಯರೂ ಆಗಿರುವ ದಲೈಲಾಮ ಅವರ ಬೆಂಬಲಿಗ  ಜಂಗ್ಚುಪ್ ಚೊಯಿಡೆನ್ ಚೀನಾದೊಂದಿಗೆ ಮಾತುಕತೆಗೆ ಮುಂದಾಗಿದ್ದು ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿದುಬಂದಿದೆ.   

ಭಾರತದ ಆತಂಕವೇನು?


* ಆಯಕಟ್ಟಿನ ಪ್ರದೇಶವಾದ ಲಡಾಕ್ ನಲ್ಲಿರುವ ಧಾರ್ಮಿಕ ಕೇಂದ್ರಗಳು ಚೀನಾ ಪರ ತಿರುಗಬಹುದು.  
*ದಲೈಲಾಮಾ ಗಳ ಧಾರ್ಮಿಕ ಕೇಂದ್ರ ಚೀನಾ ಪರವಾದರೆ ಲಡಾಕ್ ಮೇಲೆ ಚೀನಾದ ಪರೋಕ್ಷ ನಿಯಂತ್ರಣ ಸಾಧಿಸುವ ಆತಂಕ
* ಟಿಬೇಟ್ ನ್ನು ಬೆಂಬಲಿಸುವ ವಿಷಯದಲ್ಲಿ ಸೋಲುಂಟಾಗುವ ಆತಂಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ