ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಟಾರ್ಗೆಟ್ ಲಿಸ್ಟ್ ನಲ್ಲಿ ಆರ್‌ಎಸ್‌ಎಸ್, ಬಿಜೆಪಿ, ವಿಎಚ್‌ಪಿ ನಾಯಕರು ಇದ್ದಾರೆ ಎಂಬ ಆಘಾತಕಾರಿ ಸುದ್ಧಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಹಿರಂಗಗೊಳಿಸಿದೆ.
ಭಾರತದಲ್ಲಿ ಆರ್‌ಎಸ್‌ಎಸ್, ಬಿಜೆಪಿ, ವಿಎಚ್‌ಪಿ ನಾಯಕರ ಮೇಲೆ ದಾಳಿ ನಡೆಸಲು ಇಸಿಸ್ ಉಗ್ರ ಶಫೀ ಅರ್ಮಾರ್ ಸಿರಿಯಾದಲ್ಲಿ ಇದ್ದುಕೊಂಡೆ ಯೋಜನೆಯನ್ನು ಹೆಣೆದಿದ್ದಾನೆ. ಇದೇ ವೇಳೆ ಭಾರತದಲ್ಲಿ ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ತಂತ್ರ ರೂಪಿಸಲಾಗಿದೆ ಎಂದು ಎನ್ಐಎ ಹೇಳಿದೆ.
ಇಸಿಸ್ ಶಂಕಿತ ಉಗ್ರನೊಬ್ಬನನ್ನು ತೀವ್ರ ವಿಚಾರಣೆ ನಡೆಸಿದಾಗ ಈ ಆಘಾತಕಾರಿ ವಿಷಯ ಬಾಯ್ಬಿಟ್ಟಿದ್ದಾನೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಭಟ್ಕಳ ಮೂಲದ ತಲೆಮರೆಸಿಕೊಂಡಿರುವ ಉಗ್ರ ಶಫೀ ಅರ್ಮಾರ್ ಭಾರತದಲ್ಲಿ ಇಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುತ್ತಿರುವ ಪ್ರಮುಖ ವ್ಯಕ್ತಿಯಾಗಿದ್ದಾನೆ. ಆತನೀಗ ಸಿರಿಯದಲ್ಲಿದ್ದುಕೊಂಡು ಭಾರತದಲ್ಲಿನ ಇಸಿಸ್ ಉಗ್ರ ದಾಳಿಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ಎನ್ಐಎ ಹೇಳಿದೆ.